ಯುವಜನರಲ್ಲಿ ನಕಾರತ್ಮಕ ವರ್ತನೆ ತಡೆಗಟ್ಟಲು ಏಕಾಗ್ರಚಿತ್ತ ಯೋಗ ಸಹಕಾರಿ

ಏಕಾಗ್ರಚಿತ್ತ ಯೋಗವನ್ನು ಅಭ್ಯಾಸ ಮಾಡುವುದರಿಂದ ಯುವ ಜನತೆಯಲ್ಲಿ ಹೆಚ್ಚಾಗಿ ಕಾಣುವ ನಕಾರಾತ್ಮಕ ವರ್ತನೆ ತಡೆಗಟ್ಟಲು ಸಾಧ್ಯ ಎಂದು...
ಯೋಗ
ಯೋಗ
Updated on: 
ಏಕಾಗ್ರಚಿತ್ತ ಯೋಗವನ್ನು ಅಭ್ಯಾಸ ಮಾಡುವುದರಿಂದ ಯುವ ಜನತೆಯಲ್ಲಿ ಹೆಚ್ಚಾಗಿ ಕಾಣುವ ನಕಾರಾತ್ಮಕ ವರ್ತನೆ ತಡೆಗಟ್ಟಲು ಸಾಧ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ. 
ಸಿನ್ಸಿನ್ನಾಟಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸಿದ್ದು, ಹೆಚ್ಚಿನ ಒತ್ತಡದ ಜೀವನದಲ್ಲಿ ಯುವಜನತೆಯಲ್ಲಿ ನಕಾರಾತ್ಮಕ ವರ್ತನೆಯನ್ನು ತಡೆಗಟ್ಟಲು ಏಕಾಗ್ರಚಿತ್ತ ಯೋಗ ಸಹಕಾರಿ ಎಂದು ಹೇಳಿದ್ದು ಪ್ರಮುಖವಾಗಿ 18-24 ವರ್ಷದ ಯುವಕರಿಗೆ ಇದು ಹೆಚ್ಚು ಉಪಯುಕ್ತವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಸತತ 10 ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದ್ದು, ಯೌವ್ವನದಲ್ಲಿ ಕಾಡುವ ಒತ್ತಡಗಳು ಅಪಾಯಕಾರಿ ಲೈಂಗಿಕ ವರ್ತನೆ ಹಾಗೂ ನಕಾರಾತ್ಮಕ ವರ್ತನೆಗಳಿಗೆ ಕಾರಣವಾಗಿರುವ ಅಂಶಗಳಾಗಿದ್ದು ಯೌವ್ವನದಲ್ಲಿ ಕಾಡುವ ಒತ್ತಡಗಳು ಸುಮಾರು 125 ವಿಧದ ಅಪಾಯಗಳಾಗಿ ಯುವಕರನ್ನು ಕಾಡಬಹುದು ಇವುಗಳನ್ನು ತಡೆಗಟ್ಟಲು ಏಕಾಗ್ರಚಿತ್ತ ಯೋಗ ಸಹಕಾರಿ ಎಂದು ಯುಸಿ ಯಲ್ಲಿರುವ ವಿಜ್ಞಾನಿ ಡರಿಯೊಟಿಸ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com