ಕುಂಭಕರ್ಣನ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಅವನನ್ನು ಎಬ್ಬಿಸುವುದಕ್ಕೆ ರಾವಣನ ಸೈನ್ಯವೇ ಒದ್ದಾಡಿದರೂ ಆತ ಮೇಲೇಳುತ್ತಿರಲಿಲ್ಲ. ಈಗಿನವರೂ ಒಂದು ರೀತಿಯಲ್ಲಿ ಕುಂಬಕರ್ಣರೇ...! ಆದರೆ ಎಬ್ಬಿಸಲಿಕ್ಕಲ್ಲ, ನಿದ್ರಿಸುವುದಕ್ಕೇ ಹರಸಾಹಸ ಪಡಬೇಕು. ಲೋಕವೆಲ್ಲಾ ಬಂದು ಲಾಲಿ ಹಾಡಿದರೂ ನಿದ್ದೆ ಮಾತ್ರ ಸಾಧ್ಯವಿಲ್ಲದಂತಾಗಿದೆ.
ಭಾರತದಲ್ಲಿ ಸರಿಸುಮಾರಿ ಶೇ.58ರಷ್ಟು ಜನರು ರಾತ್ರಿ 11 ಗಂಟೆಯ ನಂತರ ಮಲಗುತ್ತಿದ್ದು, ಇದರ ಪರಿಣಾಮ ಬೆಳಿಗ್ಗೆ ಎದ್ದೇಳುವಾಗ ನಿಶಕ್ತಿಯ ಭಾವನೆ ಅನುಭವಿಸುತ್ತಿದ್ದಾರೆ. ಅಲ್ಲದೆ, ನಾಲ್ವರ ಪೈಕಿ ಇಬ್ಬರು ನಿದ್ರಾಹೀನತೆಯನ್ನು ಅನುಭವಿಸುತ್ತಿದ್ದಾರೆಂದು ಸಮೀಕ್ಷೆಯೊಂದು ಹೇಳಿದೆ.
ವಿಶ್ವ ನಿದ್ರಾ ದಿನ ಹಿನ್ನೆಲೆಯಲ್ಲಿ ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ಸಮೀಕ್ಷೆಯನ್ನು ಸ್ಲೀಪ್ ಮತ್ತು ಹೋಮ್ ಸೊಲ್ಯೂಶನ್ಸ್ ಪ್ರೊವೈಡರ್ ಆದ Wakefit.co ನಡೆಸಿದ್ದು, ವರದಿಯಲ್ಲಿ ನಿದ್ರಾಹೀನತೆಗ ಅತಿಯಾದ ಒತ್ತಡ ಹಾಗೂ ಡಿಜಿಟಲ್ ಗಳ ಅತಿಯಾದ ಬಳಕೆ ಕಾರಣವಾಗಿದೆ ಎಂದು ಹೇಳಿದೆ.
ಸಮೀಕ್ಷೆಯಲ್ಲಿ ಒಟ್ಟು 10,000 ಜನರನ್ನು ಬಳಸಿಕೊಳ್ಳಲಾಗಿದೆ. ಒಟಿಟಿ ಹಾಗೂ ಸಾಮಾಜಿಗ ಜಾಲತಾಣಗಳ ಅತಿಯಾದ ಬಳಕೆಯಿಂದಾಗಿ ಶೇ.54ರಷ್ಟು ಜನರು ಬೆಡ್ ಟೈಮ್ ಅನುಸರಿಸದೇ ಇರುವುದು ಹಾಗೂ ಶೇ.88ರಷ್ಟು ಜನರು ಮಲಗುವುದಕ್ಕೂ ಮುನ್ನ ಮೊಬೈಲ್ ಬಳಕೆ ಮಾಡುವುದನ್ನು ಒಪ್ಪಿಕೊಂಡಿದ್ದಾರೆ.
ಇನ್ನೂ ಶೇ.30ರಷ್ಟು ಭವಿಷ್ಯದ ಬಗೆಗಿನ ಚಿಂತೆಯಿಂದಾಗಿ ರಾತ್ರಿ ವೇಳೆ ಬರುತ್ತಿಲ್ಲ ಎಂದು ಹೇಳಿದ್ದರೆ, ಉತ್ತಮ ಹಾಸಿಗೆ ಇದ್ದರೆ ಉತ್ತಮವಾಗಿ ನಿದ್ರೆ ಮಾಡಬಹುದು ಎಂದು ಶೇ.31ರಷ್ಟು ಜನರು ಹೇಳಿದ್ದಾರೆ. ಡಿಜಿಟಲ್ ಡಿವೈಸ್ ಗಳನ್ನು ಬಳಕೆ ಮಾಡದಿದ್ದರೆ ಉತ್ತಮ ರೀತಿಯಲ್ಲಿ ನಿದ್ರೆ ಮಾಡಬಹುದು ಎಂದು ಶೇ.38ರಷ್ಟು ಜನರು ಹೇಳಿಕೊಂಡಿದ್ದಾರೆ.
ಸಮೀಕ್ಷಾ ವರದಿಯು ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರು ನಗರಗಳಲ್ಲಿ ಶೇಕಡಾ 43 ರಷ್ಟು ಜನರು ತಡವಾಗಿ ಏಳಲು ಸಾಮಾಜಿಕ ಜಾಲತಾಣಗಳೇ ಕಾರಣವೆಂದೂ ಸಮೀಕ್ಷಾ ವರದಿ ಹೇಳಿದೆ.
Advertisement