ದೇಶ

ಆಕರ್ಷಣೆ ಪತ್ತೆಗೂ ಆ್ಯಪ್!

Published On :

ನಿಮ್ಮನ್ನು ಯಾರೋ ಪದೇ ಪದೆ ತಿರುಗಿ ನೋಡುತ್ತಿರುತ್ತಾರೆ, ಸುಮ್ನೆ ಸುಮ್ನೆ ನಕ್ಕಿರುತ್ತಾರೆ. ಹಾಗಂತ ಅವರು ನಿಮಗೆ ಮನಸೋತಿದ್ದಾರೆ ಎಂದು ತಿಳಿದುಕೊಳ್ಳಲು ಸಾಧ್ಯವಿಲ್ಲವಲ್ಲ. ಹಾಗಿದ್ದರೆ ಅವರು ನಿಮಗೆ ಮನಸೋತಿದ್ದಾರಾ, ಇಲ್ವಾ ಅಂತ ತಿಳಿದುಕೊಳ್ಳುವುದು ಹೇಗೆ? ನಿಮ್ಮ ಈ ಸಮಸ್ಯೆ ದೂರಮಾಡಲೆಂದೇ ವಿಜ್ಞಾನಿಗಳು ಹೊಸತೊಂದು ಆ್ಯಪ್ ್ನದ್ಧಪಡ್ನಿದ್ದಾರೆ. ಇದು ವ್ಯಕ್ತಿಯ ಮುಖ ಹಾಗೂ ಹೃದಯದ ಬಡಿತ ಹಾಗೂ ಉ್ನರಾಟವನ್ನು ಅರ್ಥಮಾಡಿ ಕೊಂಡು ಅವರು ನಿಮ್ಮತ್ತ ಆಕರ್ಷಿತರಾಗಿದ್ದಾರಾ ಅಂತ ಹೇಳುತ್ತದಂತೆ. ಈ ಆ್ಯಪ್ ಅನ್ನು ್ನದ್ಧಪಿಡ್ನಿದ್ದು ಫಿಲಿಫ್ಸ್ ಸಂಸ್ಥೆ. ಇದು ಶೇ.99ರಷ್ಟು ನಿಖರ ಫಲಿತಾಂಶ ನೀಡುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಮೊಬೈಲ್‌ನಲ್ಲಿರುವ ಕ್ಯಾಮೆರಾವನ್ನು ನೀವು ಇಷ್ಟಪಡುವ ವ್ಯಕ್ತಿಯ ಮುಂದಿಟ್ಟರೆ ಸಾಕು. ಅದು ಆ ವ್ಯಕ್ತಿಯ ಹೃದಯ ಬಡಿತ, ಮುಖಲಕ್ಷಣದಲ್ಲಿನ ಸಣ್ಣಪುಟ್ಟ ಬದಲಾವಣೆಗಳನ್ನು ಓದಿಕೊಳ್ಳುತ್ತದೆ. ನಂತರ ಅದರ ಆಧಾರದ ಮೇಲೆ ಅವರು ನಿಜವಾಗಿಯೂ ನಿಮ್ಮತ್ತ ಆಕರ್ಷಿತರಾಗಿದ್ದಾರೆಯೇ ಎನ್ನುವುದನ್ನು ತಿಳಿಸುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.