ನಿವೃತ್ತಿ ನಂತರ ಉಳಿತಾಯ

ನಿವೃತ್ತಿ ಹೊಂದಿದ ಬಳಿಕ ಭವಿಷ್ಯದ ದೃಷ್ಟಿಯಿಂದ ಹಣಕಾಸು ಯೋಜನೆಗಳಲ್ಲಿ ಸ್ವಲ್ಪವಾದರೂ ಹಣ ಉಳಿತಾಯ ಮಾಡಬೇಕೆಂದು ಎಲ್ಲರೂ ಯೋಚಿಸುತ್ತಾರೆ. ಇದು ವೃದ್ಧಾಪ್ಯದಲ್ಲಿ ನಿಮಗೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಎಲ್ಲಿ ಹೂಡಿಕೆ ಮಾಡಬೇಕೆಂದು ನಿಮಗೆ ಗೊತ್ತಿಲ್ಲವೆಂದಾದರೆ, ಇಲ್ಲಿ ಕೆಲ ಆಯ್ಕೆಗಳನ್ನು ನೀಡಲಾಗಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ
ಇದು ನಿರ್ದಿಷ್ಟವಾಗಿ ಹಿರಿಯ ನಾಗರಿಕರಿಗೆಂದೇ ಭಾರತ ಸರ್ಕಾರ ಆರಂಭ್ನಿರುವ ಉಳಿತಾಯ ಯೋಜನೆ. 60 ವರ್ಷ ದಾಟಿದ ಪ್ರತಿಯೊಬ್ಬರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 55 ವಯಸ್ಸು ದಾಟಿದವರೂ ಕೆಲವೊಂದು ಷರತ್ತುಗಳೊಂದಿಗೆ ಇದರಲ್ಲಿ ಹೂಡಿಕೆ ಮಾಡಬಹುದು. ಯೋಜನೆಯ ಕನಿಷ್ಠ ಮಿತಿ 1 ಸಾವಿರವಾಗಿದ್ದು, ಗರಿಷ್ಠ ಮಿತಿ 15 ಲಕ್ಷ. 5 ವರ್ಷಗಳ ಈ ಉಳಿತಾಯ ಯೋಜನೆಗೆ ಶೇ.9ರಷ್ಟು ಬಡ್ಡಿ ದೊರೆಯುತ್ತದೆ. ಒಂದು ವೇಳೆ, ಯೋಜನೆ ಆರಂಭ್ನಿ 2 ವರ್ಷಗಳಾಗುವ ಮೊದಲೇ ಉಳಿತಾಯದ ಹಣವನ್ನು ಪಡೆದುಕೊಂಡರೆ ಶೇ.1.5ರಷ್ಟು ದಂಡ ವಿಧಿಸಲಾಗುತ್ತದೆ. 2 ವರ್ಷಗಳ ನಂತರ, ಆದರೆ ಅವಧಿ ಮುಗಿಯುವ ಮೊದಲೇ ಪಡೆದುಕೊಂಡರೆ ಶೇ. 1 ದಂಡ ವಿಧಿಸಲಾಗುತ್ತದೆ.
ಅಂಚೆ ಕಚೇರಿ ಮ್ನಾಕ ಆದಾಯ ಯೋಜನೆ
ದೇಶದ ಬಹುತೇಕ ಅಂಚೆ ಕಚೇರಿಗಳಲ್ಲಿ ಈ ಯೋಜನೆ ಲಭ್ಯವಿದೆ. ನೀವು ಒಬ್ಬರೇ ಆದರೆ, ಕನಿಷ್ಠ 1 ಸಾವಿರದಿಂದ ಗರಿಷ್ಠ 3 ಲಕ್ಷ, ಜಂಟಿಯಾಗಿಯಾದರೆ ಗರಿಷ್ಠ 6 ಲಕ್ಷ ಉಳಿತಾಯ ಮಾಡಬಹುದು. ಠೇವಣಿಯ ಮೇಲೆ ಶೇ.8 ಬಡ್ಡಿ ದೊರೆಯಲಿದ್ದು, ಅವಧಿ ಪೂರ್ಣಗೊಂಡ ಬಳಿಕ(6 ವರ್ಷ) ಶೇ.10 ಬೋನಸ್ ್ನಗಲಿದೆ. 1 ವರ್ಷಗಳ ಬಳಿಕ ಹಣ ಪಡೆದುಕೊಂಡರೆ ಶೇ.5 ದಂಡ. 3 ವರ್ಷದ ಬಳಿಕ ತೆಗೆದುಕೊಂಡರೆ ದಂಡ ಇರುವುದಿಲ್ಲ.
ಪೋಸ್ಟ್ ಆಫೀಸ್ ಟೈಂ ಡೆಪ್ನಾಟ್
ಉಳಿತಾಯ ಮಾಡಬಹುದಾದ ಕನಿಷ್ಠ ಮೊತ್ತ 200. ಗರಿಷ್ಠ ಮಿತಿ ಇರುವುದಿಲ್ಲ. ಅವಧಿ 1-5 ವರ್ಷಗಳು. ಬಡ್ಡಿ ದರ ಶೇ.6.25ರಿಂದ 7ರಷ್ಟು.
ನಿಶ್ಚಿತ ಠೇವಣಿ
ಬ್ಯಾಂಕ್ ಹಾಗೂ ವಿವಿಧ ಸಂಸ್ಥೆಗಳು ಈ ಸೌಲಭ್ಯ ಒದಗಿಸುತ್ತದೆ. ಬ್ಯಾಂಕ್ ಠೇವಣಿಯ ಬಡ್ಡಿ ದರ ಇತರ ಕಂಪನಿಗಳು ಒದಗಿಸುವ ಬಡ್ಡಿ ದರಕ್ಕಿಂತ ಕಡಿಮೆಯಾಗಿರುತ್ತದೆ. ಆದರೆ, ಭದ್ರತೆ ದೃಷ್ಟಿಯಿಂದ ಬ್ಯಾಂಕ್ನಲ್ಲಿ ಠೇವಣಿ ಇಡುವುದು ಉತ್ತಮ. ಯಾವಾಗಲೂ ಆಆಆ ರೇಟಿಂಗ್ ಇರುವ ಠೇವಣಿಯನ್ನೇ ಆಯ್ಕೆ ಮಾಡಿಕೊಳ್ಳಿ. ಇದು ಎಲ್ಲ ಠೇವಣಿಗಳಿಗಿಂತಲೂ ಸುರಕ್ಷಿತ.
ಮ್ನಾಕ ಆದಾಯ ಯೋಜನೆ
ಹೆಚ್ಚಿನ ರಿಟರ್ನ್ಸ್ ಬಯಸುವವರು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಮ್ಯೂಚ್ಯುವಲ್ ಫಂಡ್ಗಳು ಒದಗಿಸುವ ಮಾರುಕಟ್ಟೆ ಸಂಪರ್ಕ ಹೊಂದಿರುವ ಹೂಡಿಕೆ ಆಯ್ಕೆ ಆಗಿದೆ. ಮ್ನಾಕ ಆದಾಯ ಯೋಜನೆಯು ಸಮತೋಲನ ನಿಧಿಯಂತಿದ್ದು, ಶೇ.15-20ರಷ್ಟು ಆ್ನ್ತಯನ್ನು ಷೇರಿನ ರೂಪದಲ್ಲಿಡಬೇಕಾಗುತ್ತದೆ. ಇದಕ್ಕಾಗಿ ನೀವು ಪಡೆಯುವ ಡಿವಿಡೆಂಡ್ ತೆರಿಗೆ ಮುಕ್ತವಾಗಿರುತ್ತದೆ. ಆದರೆ, ನೀವು ಮಾರುಕಟ್ಟೆಯ ರಿಸ್ಕ್ಗಳನ್ನು ಎದುರಿಸಲು ್ನದ್ಧರಿರಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


