ರೈಲಿಗೆ ಬೀಸಿತು 'ಗಾಳಿ' ಕ್ರಾಸಿಂಗ್ಗೆ ಬಂದ 'ಸೂರ್ಯ'
ಹಸಿರಿನತ್ತ ಚಿತ್ತ ಹರಿಸಿರುವ ರೇಲ್ವೆ ಸಚಿವ ಬನ್ಸಲ್ ಅವರು, ತಮ್ಮ ಇಲಾಖೆಯನ್ನು ಪರಿಸರಸ್ನೇಹಿಯತ್ತ ಕೊಂಡೊಯ್ಯಲು ಬದ್ಧತೆಯನ್ನು ಬಜೆಟ್ನಲ್ಲಿ ಪ್ರದರ್ಶಿಸಿದ್ದಾರೆ. ಅಷ್ಟೇ ಮರುಬಳಕೆಯಾಗುವ ವಸ್ತುಗಳನ್ನು ರೈಲಿನಲ್ಲಿ ಬಳಸುವುದಕ್ಕೆ ಹಾಗೂ ಇದಕ್ಕೆ ಪೂರಕವಾಗಿ ದಕ್ಷವಾದ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳಲು ಅವರು ಆಸಕ್ತಿ ಹೊಂದಿದ್ದಾರೆ. ಇದಕ್ಕಾಗಿ ಬಜೆಟ್ನಲ್ಲಿ ಕೆಲವು ಪರಿಸರಪೂರಕ ಪ್ರಸ್ತಾವನೆಗಳನ್ನು ನೀಡಿದ್ದಾರೆ. ಅವುಗಳಲ್ಲಿ...
75 ಮೆ.ವ್ಯಾ. ಸಾಮರ್ಥ್ಯದ ಪವನಶಕ್ತಿ ಘಟಕಗಳ ಸ್ಥಾಪನೆ ಮತ್ತು ಸೌರಶಕ್ತಿ ಸಹಾಯದೊಂದಿಗೆ 1000 ಲೆವೆಲ್ ಕ್ರಾಸಿಂಗ್ಗಳು ಕಾರ್ಯನಿರ್ವಹಿಸುವಂತೆ ಮಾಡುವುದು.
ಸೌರಶಕ್ತಿ ಮತ್ತು ಪವನಶಕ್ತಿ ಶಕ್ತಿಯನ್ನು ಸಮರ್ಪಕವಾಗಿ ರೇಲ್ವೆ ಇಲಾಖೆಗೆ ಉಪಯೋಗಿಸಿಕೊಳ್ಳಲು ರೇಲ್ವೆ ಶಕ್ತಿ ವ್ಯವಸ್ಥಾಪನಾ ಕಂಪನಿ (ಆರ್ಇಎಂಸಿ)ಯ ಸ್ಥಾಪನೆಗೆ ಪ್ರಸ್ತಾವ.
ಅತ್ಯಾಧುನಿಕ ದಕ್ಷವಾದ ಎಲೆಕ್ಟ್ರಾನಿಕ್ ಎಂಜಿನ್ಗಳ ಬಳಕೆ ಮತ್ತು ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್ಸ್ (ಇಎಂಯು) ನಿಯೋಜನೆ ಪ್ರಸ್ತಾವನೆಯನ್ನು ಮಾಡಲಾಗಿದೆ. 2011-12 ರಲ್ಲಿ ಈ ಯುನಿಟ್ನಿಂದ 60 ಕೋಟಿ ಉಳಿತಾಯವಾಗಿದ್ದು, ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿಗೂ ಭಾಗಿಯಾಗಿತ್ತು.
ರೈಲು ಪ್ರಯಾಣದ ವೇಳೆ ಕೃಷಿ ಆಧಾರಿತ ಮತ್ತು ಮರುಬಳಕೆಗೆ ಯೋಗ್ಯವಾದ ಪೇಪರ್ ಅನ್ನು ಬಳಸಲು ಉತ್ತೇಜಿಸುವುದು. ಜತೆಗೆ ಕೇಟರಿಂಗ್ ವೇಳೆ ರೈಲಿನಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಉದ್ದೇಶ ಹೊಂದಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

