ಅಂಬಾನಿಗೆ ಐಎಂನಿಂದ ಬೆದರಿಕೆ
ಮುಂಬೈ: ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿರುವ ಉದ್ಯಮಿ ಮುಖೇಶ್ ಅಂಬಾನಿ ಅವರಿಗೆ ಇಂಡಿಯನ್ ಮುಜಾಹಿದೀನ್(ಐಎಂ) ಸಂಘಟನೆ ಜೀವ ಬೆದರಿಕೆ ಹಾಕಿದೆ. ಈ ಸಂಬಂಧ ಅಂಬಾನಿ ಅವರಿಗೆ ಬೆದರಿಕೆ ಪತ್ರವೊಂದನ್ನು ಸಂಘಟನೆ ಕಳುಹಿಸಿಕೊಟ್ಟಿದೆ. ಐಎಂ ಕಾರ್ಯಕರ್ತ ಡ್ಯಾನಿಷ್ನನ್ನು ಬಿಡುಗಡೆ ಮಾಡದಿದ್ದರೆ ಅಂಬಾನಿ ಅವರ 27 ಮಾಳಿಗೆಯ ವಿಲಾಸಿ ಬಂಗ್ಲೆಗೆ ಹಾನಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ರಿಲಯನ್ಸ್ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಮುಂಬೈ ಸಿಟಿ ಪೊಲೀಸ್ ಕಮಿಷನರ್ ಸತ್ಯಪಾಲ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರ ಪ್ರಕಾರ ಪತ್ರದಲ್ಲಿ ತಿಳಿಸಲಾಗಿರುವ ಡ್ಯಾನಿಷ್ 'ಮಹಮ್ಮದ್ ಡ್ಯಾನಿಷ್' ಆಗಿರಬಹುದು. ಈತನನ್ನು ಐಎಂ ಸಂಸ್ಥಾಪಕರಾದ ಭಟ್ಕಳ್ ಸಹೋದರರಿಗೆ ಆಶ್ರಯ ನೀಡಿದ ಆರೋಪದಡಿ ಬಂಧಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

