ದೇಶ

ಹುಲಿಯ ಎಲುಬಿನಿಂದ ಆಗ ಔಷಧ ಈಗ ವೈನ್!

Published On :

ನವದೆಹಲಿ: ಹುಲಿಯ ದೇಹದ ಭಾಗಗಳಿಂದ ಸಿದ್ಧಪಡಿಸಿದ ಔಷಧಕ್ಕೆ ಚೀನಾದಲ್ಲಿ ನಿಷೇಧವಿದೆ. ಅದೇ ರೀತಿ ಹುಲಿಯ ಎಲುಬಿನಿಂದ ತಯಾರಿಸಿರುವ ವೈನ್‌ಗೂ ಭಾರಿ ಬೇಡಿಕೆ ಇದೆ. ಹೀಗಾಗಿ, ವೈನ್ ನೆಪದಲ್ಲಿ ಮತ್ತಷ್ಟು ಹುಲಿಗಳು ಸಂಹಾರವಾಗುವ ಆತಂಕ ಪರಿಸರ ಪ್ರೇಮಿಗಳಲ್ಲಿ ಹೆಚ್ಚಿದೆ.
  ಇಂಥ ಒಂದು ಆಘಾತಕಾರಿ ಅಂಶವನ್ನು ಲಂಡನ್ ಮೂಲದ ಎನ್ವಿರಾನ್‌ಮೆಂಟ್ ಇನ್ವೆಸ್ಚಿಗೇಶನ್ ಏಜೆನ್ಸಿ (ಇಐಎ) ಎಂಬ ಎನ್‌ಜಿಒ ಬಹಿರಂಗಪಡಿಸಿದೆ.
ಏನಿದು ವೈನ್?: ಸಾಂಪ್ರದಾಯಿಕವಾಗಿ ವೈನ್ ಸಿದ್ಧಪಡಿಸಲಾಗುತ್ತದೆ. ಅದನ್ನು ಬಾಟಲಿಗಳಲ್ಲಿ ಹಾಕಿ ಮಾರಾಟಕ್ಕೆ ಬಿಡುಗಡೆ ಮಾಡುವ ಮುನ್ನ ವೈನ್‌ಗೆ ಎಲುಬುಗಳನ್ನು ಮುಳುಗಿಸಲಾಗುತ್ತದೆ. ಹೀಗಾಗಿ ಅದಕ್ಕೆ ಹುಲಿ ಎಲುಬಿನಿಂದ ಸಿದ್ಧಪಡಿಸಲಾಗುವ ವೈನ್ ಎಂದು ಪ್ರಚಾರ ಸಿಕ್ಕಿದೆ. ವೈನ್ ಸಿದ್ಧಪಡಿಸಲು ಬಳಸಲಾಗುವ ವಸ್ತುಗಳಿಂದ ಎಲುಬನ್ನು ಪ್ರಸ್ತಾಪಿಸುವುದೇ ಇಲ್ಲ.  ಹೀಗಾಗಿ ವೈನ್ ಸಿದ್ಧಪಡಿಸುವ ಕಂಪನಿಗಳು ಕಾನೂನು ಕಣ್ಣಿಂದ ಪಾರಾಗುತ್ತವೆ.
ಕಾನೂನು ಏನು ಹೇಳುತ್ತದೆ?:  ಕಾನೂನು ಪ್ರಕಾರ ಪ್ರವಾಸಿಗರ ವೀಕ್ಷಣೆಗಾಗಿ ಇರುವ ಹುಲಿಗಳ (ಮೃಗಾಲಯದಲ್ಲಿರುವ) ಎಲುಬುಗಳನ್ನು ಬಳಸಲು ಅನುಮತಿ ಇದೆ. ಸರ್ಕಾರದ ಇದೇ ಪ್ರಕಟಣೆಯನ್ನು ವೈನ್ ಕಂಪನಿಗಳು ದುರುಪಯೋಗ ಮಾಡಲಿವೆ ಎನ್ನುವುದು ಪರಿಸರ ಸಂಘಟನೆಗಳ ಆತಂಕ. ಹೀಗಾಗಿ, ಕಂಪನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಅಸಾಧ್ಯ ಎನ್ನಲಾಗುತ್ತಿದೆ.

ಎಷ್ಟು ಬೆಲೆ?
ಎಷ್ಟು ಸಮಯದ ಕಾಲ ವೈನ್‌ನಲ್ಲಿ ಹುಲಿಯ ಎಲುಬುಗಳನ್ನು ಮುಳುಗಿಸಿದೆ ಎನ್ನುವುದರ ಆಧಾರದ ಮೇಲೆ ದರ ನಿಗದಿಯಾಗುತ್ತದೆ. ಹೀಗಾಗಿ ಬೆಲೆ ರು. 5,412 ರಿಂದ ರು. 43,302 ವರೆಗೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.