ದೇಶ

ವಿಶ್ವರೂಪಂಗೆ ತಡೆ

ನಟ ಕಮಲ್‌ಹಾಸನ್ ಅಭಿನಯದ ವಿಶ್ವರೂಪಂ ಶುಕ್ರವಾರ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಬಿಡುಗಡೆಗೊಳ್ಳುವುದಿಲ್ಲ.

ವಿಶ್ವರೂಪಂಗೆ ತಡೆ
Published On :

ಚೆನ್ನೈ: ನಟ ಕಮಲ್‌ಹಾಸನ್ ಅಭಿನಯದ ವಿಶ್ವರೂಪಂ ಶುಕ್ರವಾರ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಬಿಡುಗಡೆಗೊಳ್ಳುವುದಿಲ್ಲ.
ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬ ನೆಪದಿಂದ ಈ ಚಿತ್ರವನ್ನು ನಿಷೇಧಿಸಿದ್ದ ಜಯಾ ಆದೇಶ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದ ಕಮಲ್‌ಹಾಸನ್ ಅವರಿಗೆ ಅಲ್ಲೂ ನಿರಾಸೆಯಾಗಿದೆ. ಜ.28 ರವರೆಗೆ ವಿಚಾರಣೆ ಮುಂದೂಡಿರುವ ಹೈಕೋರ್ಟ್ ನ್ಯಾಯಮೂರ್ತಿಗಳು, ಶನಿವಾರ ಚಿತ್ರ ವೀಕ್ಷಿಸಿ ಬಳಿಕ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಅಲ್ಲಿವರೆಗೆ ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಚಿತ್ರ ಬಿಡುಗಡೆಗೆ ತಡೆ ನೀಡಿರುವ ಕೋರ್ಟ್, ಉಳಿದೆಡೆಗಳಲ್ಲಿ ಪ್ರದರ್ಶನವಾಗಲು ಅಡ್ಡಿ ಇಲ್ಲ ಎಂದಿದೆ.
ಜಯಾ ವಿರುದ್ಧ ಕಮಲ್ ಆಕ್ರೋಶ: ಇದಕ್ಕೂ ಮುನ್ನ ಲಾಸ್‌ಏಂಜಲೀಸ್‌ನಿಂದ ಸುದ್ದಿವಾಹಿನಿಗಳ ಜೊತೆ ಮಾತನಾಡಿದ ಕಮಲ್ ಹಾಸನ್ ಅವರು ಜಯಲಲಿತಾ ಅವರು ಸಾಂಸ್ಕೃತಿಕ ಭಯೋತ್ಪಾದನೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಮುಸ್ಲಿಮರ ಭಾವನೆಗಳಿಗೆ ವಿರುದ್ಧವಾದ ಯಾವುದೇ ಸನ್ನಿವೇಶ ಚಿತ್ರದಲ್ಲಿಲ್ಲ. ಆದರೂ ಈ ಚಿತ್ರಕ್ಕೆ ನಿಷೇಧ ಹೇರಲಾಗಿದೆ ಎಂದು ಹೇಳಿದ್ದರು.
ಜಯಲಲಿತಾ ಅವರು ಬುಧವಾರವಷ್ಟೇ ಈ ಚಿತ್ರದ ಬಿಡುಗಡೆಗೆ ನಿಷೇಧ ಹೇರಿದ್ದರು. ಇದನ್ನು ಕಮಲ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.