ಮಿರಾಕಲ್ ಬೇಬಿ!
ಇದು ನಿಜಕ್ಕೂ ಮಿರಾಕಲ್ ಬೇಬಿ! ಎಲ್ಲಾ ಮಕ್ಕಳಿಗೂ ಎದೆಗೂಡಿನೊಳಗೆ ಹೃದಯವಿದ್ದರೆ ಈ ಮಗುವಿಗೆ ಮಾತ್ರ ಹೊರಗೆ. ಹಾಗಂತ ಇಂಥ ಮಕ್ಕಳು ಹುಟ್ಟುವುದೇ ಇಲ್ಲವಂದಲ್ಲ. ಹಾಗೊಂದು ವೇಳೆ ಹುಟ್ಟಿದರೂ ಮೂರೇ ದಿನಗಳಲ್ಲಿ 10ರಲ್ಲಿ 9 ಮಗು ಅಸುನೀಗುತ್ತದೆ. ಆದರೆ, ಇಂಥ ವಿಚಿತ್ರದ ನಡುವೆಯೂ ಮಗು ಮೂರೂವರೆ ತಿಂಗಳಿಂದ ಜೀವ ಉಳಿಸಿಕೊಂಡಿದೆ. ಕಳೆದ ನವೆಂಬರ್ನಲ್ಲಿ ಹುಟ್ಟಿದ ಆಡ್ರಿನಾ ಕಾರ್ಡೆನಾಸ್ ಎಕ್ಟೋಪಿಯಾ ಕಾರ್ಡಿಸ್ ರೋಗದಿಂದ ಬಳಲುತ್ತಿದೆ. ಇಂಥ ಮಗುವಿನ ಹೃದಯ ಎದೆಗೂಡಿನಿಂದ ಹೊರಗಿರುತ್ತದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಹೃದಯ ಮತ್ತಷ್ಟು ಹೊರಬರದಂತೆ ನೋಡಿಕೊಳ್ಳಲು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅದಕ್ಕೆ ಯಾವುದೇ ಹಾನಿಯಾಗದಂತೆ ಫೈಬರ್ ರಕ್ಷಾ ಕವಚ ಮಗುವಿನ ದೇಹಕ್ಕೆ ಅಳವಡಿಸಲಾಗಿದೆ. ಸದ್ಯ ಮಗು ಆರೋಗ್ಯದಿಂದಿದ್ದು ಪೋಷಕರ ಜತೆಗೆ ಮೆನೆಗೆ ತೆರಳಿದೆ. ಕೆಲ ವರ್ಷಗಳ ಬಳಿಕ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಎದೆಗೂಡಿನೊಳಗೆ ಶಾಶ್ವತ ರಕ್ಷಾಕವಚ ಅಳವಡಿಸಲು ವೈದ್ಯರು ನಿರ್ಧರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

