ದೇಶ

ಕಡಲಾಳದ ಮೂಲಕ ಹಾರಿಸುವ ಕ್ಷಿಪಣಿ ಕೆ.5 ಪ್ರಯೋಗ ಯಶಸ್ವಿ

ಕಡಲಾಳದ ಮೂಲಕ ಹಾರಿಸುವ ಕ್ಷಿಪಣಿ ಕೆ.5 ಪ್ರಯೋಗ ಯಶಸ್ವಿ
Published On :

ಬಂಗಾಳಕೊಲ್ಲಿ: ಕಡಲಾಳದ ಮೂಲಕ ಹಾರಿಸಬಹುದಾದ ಕೆ.5 ಪ್ರಕ್ಷೇಪಣ ಕ್ಷಿಪಣಿಯನ್ನು ಬಂಗಾಳ ಕೊಲ್ಲಿಯಲ್ಲಿ ಭಾನುವಾರ ಯಶಸ್ವಿಯಾಗಿ ಪ್ರಯೋಗ ಮಾಡಲಾಯಿತು. ಸಬ್‌ಮೆರೀನ್‌ಗಳ ಮೂಲಕ ನೀರಿನಾಳದಿಂದಲೇ ಉಡಾಯಿಸಬಹುದಾದ ಭಾರತದ ಮೊದಲ ಮಧ್ಯಮ ವ್ಯಾಪ್ತಿಯ ಕ್ಷಿಪಣಿ ಇದಾಗಿದೆ. ಈ ಮೂಲಕ ನೆಲ, ಜಲ ಮತ್ತು ಆಕಾಶದ ಮೂಲಕ ಹಾರಿಸಬಲ್ಲ ಕ್ಷಿಪಣಿಗಳನ್ನು ಹೊಂದಿದ ದೇಶಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ. ಅಮೆರಿಕ, ಫ್ರಾನ್ಸ್, ರಷ್ಯಾ ಮತ್ತು ಚೀನಾದಂಥ ಕೆಲವೇ ಕೆಲವು ದೇಶಗಳು ಮಾತ್ರ ಈ ರೀತಿಯ ಕ್ಷಿಪಣಿಗಳನ್ನು ಹೊಂದಿದೆ.

ವಿಶೇಷ ಏನು?
  ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯ ಬಲ್ಲುದು
  1500 ಕಿ.ಮೀ. ದೂರದ ಗುರಿ ಭೇದಿಸುವ ಸಾಮರ್ಥ್ಯ
  ಸಬ್‌ಮರೀನ್‌ಗಳಿಗೆ ಅದರಲ್ಲೂ ಐಎನ್‌ಎಸ್ ಅರಿಹಂತ್‌ಗೆ ಅಳವಡಿಸಲೆಂದೇ ಕ್ಷಿಪಣಿ ಅಭಿವೃದ್ಧಿ
  ಡಿಆರ್‌ಡಿಒದ ಹೈದರಾಬಾದ್‌ನ ಡಿಫೆನ್ಸ್ ರಿಸರ್ಚ್ ಮತ್ತು ಡೆವಲಪ್‌ಮೆಂಟ್ ಲ್ಯಾಬೊರೇಟರಿ ಈ ಕ್ಷಿಪಣಿಯ ನಿರ್ಮಾಣ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.