ದೇಶ

ಶಿಷ್ಟಾಚಾರ ಒಲ್ಲದ ಪ್ರಣಬ್

ಶಿಷ್ಟಾಚಾರ ಒಲ್ಲದ ಪ್ರಣಬ್
Published On :

ನವದೆಹಲಿ: ಶಿಷ್ಟಾಚಾರ ಮುರಿಯುವಲ್ಲಿ ರಾಷ್ಟ್ರಪತಿ ಪ್ರಣಬ್ ಅವರದ್ದು ಎತ್ತಿದ ಕೈ.
ಈಗಾಗಲೇ 'ಶ್ರೀ', 'ಗೌರವಾನ್ವಿತ'ದಂಥ ಪದಗಳನ್ನು ತಮ್ಮ ಕಡತದಿಂದ ಕಿತ್ತುಹಾಕಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಇದೀಗ ಗಣರಾಜ್ಯೋತ್ಸವ ಸಂದರ್ಭದಲ್ಲೂ ಹೊಸದೊಂದು ಭಾಷ್ಯ ಬರೆದಿದ್ದಾರೆ.
ಸಾಮಾನ್ಯವಾಗಿ ಮುಘಲ್ ಗಾರ್ಡನ್‌ನಲ್ಲಿ ನಡೆಯವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅತಿಥಿಗಳೇ ಕ್ಯೂನಲ್ಲಿ ನಿಂತು ರಾಷ್ಟ್ರಪತಿಗಳನ್ನು ಮಾತನಾಡಿಸಬೇಕು. ಆದರೆ ಈ ಬಾರಿ ಎಲ್ಲವೂ ಉಲ್ಟಾ ಆಗಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೇ ಪಾಲ್ಗೊಂಡಿದ್ದ ಅತಿಥಿಗಳೆಡೆಗೆ ಹೋಗಿ ಮಾತನಾಡಿಸಿದ್ದಾರೆ. ಅವರ ಕುಶಲೋಪರಿ ಕೇಳಿದ್ದಾರೆ.  ಈ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಗಣರಾಜ್ಯೋತ್ಸವ ಅತಿಥಿ ಖೇಸರ್ ವಾಂಗ್‌ಚುಕ್, ಪತ್ನಿ ಜೇತ್ಸನ್ ಫೇಮಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಪುಟ ದರ್ಜೆ ಸಚಿವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.