ದೇಶ

ಕಸಬ್‌ಗೆ ಗಲ್ಲು ಬೇಡ: ಪತ್ರ ಬರೆದಿದ್ದ ಎನ್‌ಎಸಿ ಸದಸ್ಯರು!

ಕಸಬ್‌ಗೆ ಗಲ್ಲು ಬೇಡ: ಪತ್ರ ಬರೆದಿದ್ದ ಎನ್‌ಎಸಿ ಸದಸ್ಯರು!
Published On :

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಸಮಿತಿ(ಎನ್‌ಎಸಿ)ಯ ಸದಸ್ಯರಿಬ್ಬರು ಪಾಕ್ ಉಗ್ರ ಅಜ್ಮಲ್ ಕಸಬ್‌ನನ್ನು ಗಲ್ಲುಶಿಕ್ಷೆಯಿಂದ ರಕ್ಷಿಸಲು ಪ್ರಯತ್ನಿಸಿದ್ದರು!
ಹೌದು. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿದ್ದ ವರದಿಯು ಈ ವಿಚಾರವನ್ನು ಬಹಿರಂಗಪಡಿಸಿದೆ.
 ಕಸಬ್‌ಗೆ ಮರಣದಂಡನೆ ಬೇಡ ಎಂದು ಮನವಿ ಮಾಡಿ ಎನ್‌ಸಿಎಯ ಹಾಲಿ ಸದಸ್ಯೆ ಅರುಣಾ ರಾಯ್, ಮಾಜಿ ಸದಸ್ಯ ಹರ್ಷ್ ಮಂದೆರ್ ರಾಷ್ಟ್ರಪತಿಗೆ ಪತ್ರಬರೆದಿದ್ದರು.
ಆದರೆ, ಮಂದೆರ್ ಅರ್ಜಿಯನ್ನು ರಾಷ್ಟ್ರಪತಿ ಮುಖರ್ಜಿ ತಿರಸ್ಕರಿಸಿದ್ದರು. ಇವರಿಬ್ಬರಲ್ಲದೆ ಹಲವು ಪ್ರಮುಖ ಪತ್ರಕರ್ತರು ಹಾಗೂ ಮಾನವ ಹಕ್ಕುಗಳ ಆಯೋಗದ ಸದಸ್ಯರೂ ಸೇರಿ ಒಟ್ಟು 201 ಮಂದಿ ಕಸಬ್‌ಗೆ ಕ್ಷಮಾದಾನ ನೀಡುವಂತೆ ಆಗ್ರಹಿಸಿ ಪ್ರಣಬ್‌ಗೆ ಪತ್ರ ಬರೆದಿದ್ದರಂತೆ. ಈ ಆರ್‌ಟಿಐ ಅರ್ಜಿಯನ್ನು ಸುಬ್ರಹ್ಮಣ್ಯನ್ ಸ್ವಾಮಿ ಅವರ ಜನತಾ ಪಕ್ಷದ ಸದಸ್ಯರೊಬ್ಬರು ಸಲ್ಲಿಸಿದ್ದರು.
ಸ್ವಾಮಿ ಆಕ್ರೋಶ: ಉಗ್ರ ಕಸಬ್‌ಗೆ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದ ಎನ್‌ಎಸಿಯ ಸದಸ್ಯರಿಬ್ಬರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜನತಾ ಪಕ್ಷದ ಮುಖ್ಯಸ್ಥ ಸುಬ್ರಹ್ಮಣ್ಯನ್ ಸ್ವಾಮಿ, ದೇಶದ ಭವಿಷ್ಯ ನಿರ್ಧರಿಸುವ ಎನ್‌ಎಸಿಯಲ್ಲಿ ಇಂಥ ವ್ಯಕ್ತಿಗಳಿರುವುದು ಬೇಸರದ ಸಂಗತಿ ಎಂದಿದ್ದಾರೆ.
ಈಗಾಗಲೇ ಎನ್‌ಎಸಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದ ಮಂದೇರ್ ಈ ಹಿಂದೆಯೂ ವಿವಾದಕ್ಕೆ ಗುರಿಯಾಗಿದ್ದರು. ಸಂಸತ್ತಿನ ಮೇಲೆ ದಾಳಿ ನಡೆಸಿದ ಆರೋಪ ಹೊತ್ತಿರುವ ಅಫ್ಜಲ್ ಗುರು ಅನ್ನು ಉಳಿಸುವಂತೆ ಕೋರಿ ಅವರು ಮನವಿ ಸಲ್ಲಿಸಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.