ದೇಶ

ಕ್ಷಿಪಣಿ ಪರೀಕ್ಷೆಯಶಸ್ವಿಯಾದಾಗ ಕಣ್ಣೀರಿಟ್ಟ ಚಕ್ರವರ್ತಿ

Published On :

ಬಂಗಾಳಕೊಲ್ಲಿ: ಭಾನುವಾರವಷ್ಟೇ ಬಂಗಾಳಕೊಲ್ಲಿಯಲ್ಲಿ ಸಮುದ್ರದಾಳದಿಂದ ಸಬ್‌ಮರೀನ್ ಆಧಾರಿತ ಛೇದನಾ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿ ನೆರವೇರುತ್ತಿದ್ದಂತೆ ಇತ್ತ ಕ್ಷಿಪಣಿಯ ವಿನ್ಯಾಸಕಾರ ಎ.ಕೆ. ಚಕ್ರವರ್ತಿ ಅವರ ಕಣ್ಣಾಲಿಗಳು ತುಂಬಿದವು.
 ಹೌದು. ಹೈದರಾಬಾದ್‌ನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯದ ನಿರ್ದೇಶಕರಾಗಿರುವ ಚಕ್ರವರ್ತಿ ಅವರು ಈ ಕ್ಷಿಪಣಿಯ ಪರೀಕ್ಷೆಗಾಗಿಯೇ ಕಾದು ಕುಳಿತಿದ್ದರು. ಏಕೆಂದರೆ, ಕ್ಷಿಪಣಿ ಪರೀಕ್ಷೆ ಮುಗಿದ ಬಳಿಕ ಅವರು ನಿವೃತ್ತಿ ಹೊಂದುವವರಿದ್ದರು. ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗುತ್ತಿದ್ದಂತೆಯೇ ಯುವವಿಜ್ಞಾನಿಗಳ ತಂಡವು ಚಕ್ರವರ್ತಿ ಅವರನ್ನು ತಮ್ಮ ಹೆಗಲ ಮೇಲೇರಿಸಿಕೊಂಡು ಕುಣಿದಾಡಿದರು. ಈ ವೇಳೆ ಮಾತನಾಡಿದ ಚಕ್ರವರ್ತಿ ಅವರು, 'ನನ್ನ ಕಣ್ಣಲ್ಲಿ ಬರುತ್ತಿರುವುದು ಸಂತೋಷದ ಕಣ್ಣೀರು' ಎಂದರು. ತಾನು ಕ್ಷಿಪಣಿ ವಿನ್ಯಾಸದ ಕಲೆಯನ್ನು ಕಲಿತಿದ್ದು ಭಾರತದ ಕ್ಷಿಪಣಿ ಮಾನವ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ. ಅವರಿಗೆ ನಾನು ಎಂದೆಂದೂ ಆಭಾರಿ ಎಂದೂ ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.