ವಿಶ್ವರೂಪಂ ಆಟ ಫೆ. 6 ಕ್ಕೆ ಶಿಫ್ಟ್
ನಟ ಕಮಲಹಾಸನ್ ಅವರ ಬಹುಕೋಟಿ ವೆಚ್ಚದ 'ವಿಶ್ವರೂಪಂ' ಬಿಡುಗಡೆ ಕನಸಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

ಚೆನ್ನೈ: ನಟ ಕಮಲಹಾಸನ್ ಅವರ ಬಹುಕೋಟಿ ವೆಚ್ಚದ 'ವಿಶ್ವರೂಪಂ' ಬಿಡುಗಡೆ ಕನಸಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಚಿತ್ರ ಪ್ರದರ್ಶನದ ಮೇಲೆ ತಮಿಳುನಾಡು ಸರ್ಕಾರ ಹೇರಿದ್ದ ನಿಷೇಧ ತೆರವುಗೊಳಿಸಿ ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ಬುಧವಾರ ವಿಭಾಗೀಯ ಪೀಠ ತಡೆ ನೀಡಿದೆ.
ಕಮಲ್ ಅವರು ಆಕ್ಷೇಪಾರ್ಹ ಭಾಗವನ್ನು ತೆಗೆದು ಹಾಕುವ ಭರವಸೆ ನೀಡಿದ ಹೊರತಾಗಿಯೂ ಪ್ರಭಾರ ಮುಖ್ಯನ್ಯಾಯಮೂರ್ತಿ ಎಲಿಪ್ ಧರ್ಮಾ ರಾವ್ ಮತ್ತು ಅರುಣ್ ಜಗದೀಶನ್ ಅವರಿದ್ದ ಪೀಠವು ಈ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಫೆ. 6ರ ವರೆಗೆ ವಿಶ್ವರೂಪಂ ಪ್ರದರ್ಶನ ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಮಲ್ ಅವರು ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ಗುರುವಾರ ಸುಪ್ರೀಂಕೋರ್ಟ್ ಕದ ತಟ್ಟುವ ಸಾಧ್ಯತೆ ಇದೆ. ಮುಸ್ಲಿಂ ಸಂಘಟನೆಗಳ ವಿರೋಧದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಚಿತ್ರದ ಮೇಲೆ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಕಮಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕಸದಸ್ಯ ಪೀಠ ಮಂಗಳವಾರ ನಿಷೇಧ ತೆರವುಗೊಳಿಸಿ ಮಧ್ಯಂತರ ಆದೇಶ ನೀಡಿತ್ತು. ಇದರ ವಿರುದ್ಧ ಸರ್ಕಾರ ಬುಧವಾರ ಮೇಲ್ಮನವಿ ಸಲ್ಲಿಸಿತು.
ಕೆಲ ದೃಶ್ಯಗಳಿಗೆ ಕತ್ತರಿ: ವಿಚಾರಣೆ ವೇಳೆ, ಕಮಲ್ ವಿವಾದವನ್ನು ಸೌಹಾರ್ದವಾಗಿ ಪರಿಹರಿಸಿದ್ದಾಗಿ ಹೇಳಿದ್ದರು. ಮುಸ್ಲಿಂ ಮುಖಂಡರ ಜತೆ ಮಾತುಕತೆ ನಡೆಸಿದ್ದೇನೆ. ಅವರ ಬೇಡಿಕೆಯಂತೆ ಕುರಾನ್‌ಗೆ ಸಂಬಂಧಿಸಿದ ಕೆಲ ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದರು.
ಚಿತ್ರಕ್ಕಾಗಿ ಎಲ್ಲ ಆಸ್ತಿ ಅಡವು: ಕಮಲ್
95 ಕೋಟಿ ವೆಚ್ಚದ ಈ ತ್ರಿಭಾಷಾ ಚಿತ್ರಕ್ಕಾಗಿ ಎಲ್ಲಾ ಆಸ್ತಿಗಳನ್ನು ಅಡವಿಟ್ಟಿದ್ದೇನೆ. ಚಿತ್ರ ಬಿಡುಗಡೆಗೆ ಆಗುತ್ತಿರುವ ವಿಳಂಬದಿಂದಾಗಿ ತಮ್ಮ ಮನೆಯನ್ನು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದೇನೆ. ನಾನು ಹಾಗೂ ನನ್ನ ಮುಸ್ಲಿಂ ಗೆಳೆಯರು ಇಬ್ಬರೂ ರಾಜಕೀಯ ಆಟದ ಭಾಗವಾಗುತ್ತಿದ್ದೇವೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ, ನಾನು ಎಡಪಂಥೀಯನೂ ಅಲ್ಲ, ಬಲಪಂಥೀಯನೂ ಅಲ್ಲ. ನನ್ನ ನಿಲುವೇನು ಎನ್ನುವುದನ್ನು ಇತಿಹಾಸ ಸಾಬೀತುಪಡಿಸಿದೆ ಎಂದು ಕಮಲ್ ಹೇಳಿದ್ದಾರೆ.
ಚಿತ್ರಮಂದಿರಗಳ ಮೇಲೆ ಪೆಟ್ರೋಲ್ ಬಾಂಬ್
ವಿಶ್ವರೂಪಂ ಚಿತ್ರ ಪ್ರದರ್ಶನವಾಗಬೇಕಿದ್ದ ತಮಿಳುನಾಡಿನ ರಾಮನಾಥಪುರಂನ ಎರಡು ಚಿತ್ರಮಂದಿರಗಳಲ್ಲಿ ಅಪರಿಚಿತ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದ ಹಾಗೂ ಕಲ್ಲುತೂರಾಟ ನಡೆಸಿದ ಘಟನೆ ನಡೆದಿದೆ. ಇದೇ ವೇಳೆ, ಈರೋಡ್ ಹಾಗೂ ಥೇನಿಯ ಚಿತ್ರಮಂದಿರಗಳಲ್ಲಿ ವಿಶ್ವರೂಪಂ ಪ್ರದರ್ಶನಕ್ಕೆ ಆಗ್ರಹಿಸಿ ಕಮಲ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


