ದೇಶ

ಅನುರಾಗ್‌ಗೆ ಲೈಸೆನ್ಸ್ ನಿರಾಕರಿಸಿದ್ದ ಖಾಸಗಿ ಡಿಟೆಕ್ಟಿವ್‌ಗಳ ಸಂಘ

Published On :

ನವದೆಹಲಿ: ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರ ಫೋನ್ ಕದ್ದಾಲಿಕೆಗೆ ಸಂಬಂಧಿಸಿ ಬಂಧಿತನಾಗಿರುವ ಅನುರಾಗ್ ಸಿಂಗ್ ಖಾಸಗಿ ಡಿಟೆಕ್ಟಿವ್‌ಗಳ ಸಂಘದಿಂದ ಪರವಾನಗಿ ಪಡೆಯಲು ವಿಫಲ ಯತ್ನ ನಡೆಸಿದ್ದ ಎಂಬ ವಿಷಯ ಈಗ ಬಹಿರಂಗವಾಗಿದೆ.
 ದೇಶದ ಏಕೈಕ ಮಾನ್ಯತೆ ಪಡೆದಿರುವ ಪ್ರೈವೇಟ್ ಡಿಟೆಕ್ಟಿವ್ಸ್ ಅಸೋಸಿಯೇಷನ್ ಈ ವಿಚಾರವನ್ನು ತಿಳಿಸಿದೆ. 2005-06ರಲ್ಲಿ ಅಮರ್ ಸಿಂಗ್ ಅವರ ಫೋನ್ ಕದ್ದಾಲಿಕೆ ಪ್ರಕರಣ ನಡೆದ ಕೆಲ ದಿನಗಳ ಬಳಿಕ ಖಾಸಗಿ ಡಿಟೆಕ್ಟಿವ್ ಆಗಿರುವ ಅನುರಾಗ್ ಸಿಂಗ್ ತಮ್ಮ ಸಂಘವನ್ನು ಸಂಪರ್ಕಿಸಿದ್ದ. ತನಗೆ ಸಂಘದ ಸದಸ್ಯನೆಂಬ ಪರವಾನಗಿ ಒದಗಿಸಬೇಕೆಂದು ಕೋರಿದ್ದ. ಆದರೆ, ಆತನ ಬಗೆಗಿನ ಮಾಹಿತಿಗಳು ರುಜುವಾತು ಆಗದ ಕಾರಣ ಸಂಘವು ಲೈಸೆನ್ಸ್ ನೀಡಲು ನಿರಾಕರಿಸಿತ್ತು ಎಂದು ಸಂಘದ ಅಧ್ಯಕ್ಷ ಕುನ್ವಾರ್ ವಿಕ್ರಂ ಸಿಂಗ್ ಹೇಳಿದ್ದಾರೆ. ನಾವು ಯಾರಿಗೂ ಸಿಡಿಆರ್ ಒದಗಿಸುವ ಕೆಲಸ ಮಾಡುವುದಿಲ್ಲ ಎಂದೂ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.