ಕಾನೂನು ಉಲ್ಲಂಘನೆಯ ಅರಿವು ಇತ್ತು!
ಕಾಪ್ಟರ್ ಡೀಲ್ ಕುದುರಿಸಲು ಲಂಚ ನೀಡುವ ಮೂಲಕ ತಾವು ಭಾರತೀಯ ಕಾನೂನು...

ನವದೆಹಲಿ: ಕಾಪ್ಟರ್ ಡೀಲ್ ಕುದುರಿಸಲು ಲಂಚ ನೀಡುವ ಮೂಲಕ ತಾವು ಭಾರತೀಯ ಕಾನೂನು ಉಲ್ಲಂಘಿಸುತ್ತಿದ್ದೇವೆ ಎನ್ನುವುದು ಫಿನ್‌ಮೆಕಾನಿಕಾ ಕಂಪನಿಯ ಹಿರಿಯ ಅಧಿಕಾರಿಗಳಿಗೆ ಅರಿವಿತ್ತು ಎನ್ನುವುದು ಇದೀಗ ಬಹಿರಂಗವಾಗಿದೆ. ಆದರೆ, ಫಿನ್‌ಮೆಕಾನಿಕಾ ಮಾತ್ರ ತಾನು ಕಾನೂನಿಗೆ ಬದ್ಧವಾಗಿದ್ದೇನೆ ಎಂದು ಹೇಳಿದೆ.
ಒಂದು ವೇಳೆ ಲಂಚದ ವಿಚಾರ ಬಹಿರಂಗವಾದರೆ ಅದು ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಸಾಧ್ಯತೆ ಇತ್ತು ಎಂದು ಫಿನ್‌ಮೆಕಾನಿಕಾದ ಮಾಜಿ ಅಂತಾರಾಷ್ಟ್ರೀಯ ಸಂಪರ್ಕ ಮುಖ್ಯಸ್ಥ ಲೋರೆನ್ಜೋ ಬೊರ್‌ಗೋನಿ ಇಟಲಿ ಪ್ರಾಸಿಕ್ಯೂಟರ್‌ಗಳಿಗೆ ತಿಳಿಸಿದ್ದಾರೆ. ಕಂಪನಿಯು ಈ ಡೀಲ್ ಕುದುರಿಸಲು ಮಧ್ಯವರ್ತಿಗಳನ್ನು ಯಾಕೆ ಬಳಸಿತು ಎನ್ನುವ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ. 3600 ಕೋಟಿಯ ಹೆಲಿಕಾಪ್ಟರ್ ಹಾಗೂ 44 ಸಾವಿರ ಕೋಟಿಯ ಇತರೆ ಡೀಲ್ ರದ್ದಾಗುವ ಭೀತಿ ಹಿನ್ನೆಲೆಯಲ್ಲಿ ಫಿನ್‌ಮೆಕಾನಿಕಾ ಕಂಪನಿ ಒಪ್ಪಂದ ಕುದುರಿಸಲು ತಾನು ಯಾವುದೇ ಲಂಚ ನೀಡಿಲ್ಲ ಎಂದು ಸಮರ್ಥಿಸಿಕೊಂಡಿತ್ತು.
ಐಎಎಫ್ ಲೆಕ್ಕಪತ್ರ ವಿಭಾಗದಿಂದ ತನಿಖೆ: ಭಾರತೀಯ ವಾಯುಸೇನೆ ಮತ್ತು ರಕ್ಷಣಾ ಲೆಕ್ಕಪತ್ರ ವಿಭಾಗದ ಅಧಿಕಾರಿಗಳು ಬಹುಕೋಟಿ ಕಾಪ್ಟರ್ ಡೀಲ್‌ಗೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಸಿಬಿಐನ ವಿಶೇಷ ತಂಡಕ್ಕೆ ಸಹಕಾರ ನೀಡಲಿದ್ದಾರೆ. ಈ ತಂಡವು ಫಿನ್‌ಮೆಕಾನಿಕಾ ಮತ್ತು ಇಟಲಿಯಿಂದ ಸಂಗ್ರಹಿಸಿದ್ದ ದಾಖಲೆಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಇದಲ್ಲದೆ ಸಿಬಿಐ ವಿಶೇಷ ತಂಡಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೂ ಸಹಕಾರ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


