ಬಿಜೆಪಿಗಿದೆ ಮಿಷನ್, ಕೈ ಗುರಿ ಬರೀ ಕಮಿಷನ್

ನವದೆಹಲಿ: ಬಿಜೆಪಿಗೆ ಮಿಷನ್(ಗುರಿ) ಇದ್ದರೆ ಕಾಂಗ್ರೆಸ್ ಗುರಿ ಕೇವಲ ಕಮಿಷನ್ ಮಾತ್ರ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಪ್ರಮುಖ ವ್ಯತ್ಯಾಸ ಇದೇ ಆಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯ ಕೊನೆಯ ದಿನ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿವೆ. ಆದರೆ, ಕಾಂಗ್ರೆಸ್ಗೆ ದೇಶವನ್ನು ಅಭಿವೃದ್ಧಿಪಡಿಸುವ ಯಾವುದೇ ಉದ್ದೇಶ ಇಲ್ಲ. ಸ್ಪೆಕ್ಟ್ರಂ ಹಂಚಿಕೆ, ಹೆಲಿಕಾಪ್ಟರ್ ಖರೀದಿ ಸೇರಿದಂತೆ ಪ್ರತಿಯೊಂದರಲ್ಲೂ ಅದು ಕಮಿಷನ್ ಎದುರು ನೋಡುತ್ತದೆ. ಆ ಪಕ್ಷಕ್ಕೆ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಇಲ್ಲ. ಹಾಗಾಗಿ ಕಾಂಗ್ರೆಸ್ನ ದುರಾಡಳಿತದಿಂದ ದೇಶವನ್ನು ಮುಕ್ತಗೊಳಿಸುವ ಕಾಲ ಸನ್ನಿಹಿತವಾಗಿದೆ. ಕಾಂಗ್ರೆಸ್ ಆಡಳಿತಕ್ಕೆ ಅಂತ್ಯ ಹಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ದೇಶಭಕ್ತಿ ಪ್ರದರ್ಶಿಸಬೇಕಿದೆ. ಕಾಂಗ್ರೆಸ್ ಅನ್ನು ಅಧಿಕಾರದಿಂದ ಕಿತ್ತೊಗೆಯುವ ಕೆಲಸವನ್ನು ಸ್ವಾತಂತ್ರ್ಯ ಹೋರಾಟವೆಂದು ಕಾರ್ಯಕರ್ತರು ಪರಿಭಾವಿಸಬೇಕಿದೆ ಎಂದು ತಿಳಿಸಿದ್ದಾರೆ.
ಗುಜರಾತ್ ಅಭಿವೃದ್ಧಿ ಕುರಿತು ಮಾತನಾಡಬೇಕಿದ್ದ ಮೋದಿ ತಮ್ಮ ಒಂದು ಗಂಟೆಗಳಷ್ಟು ದೀರ್ಘ ಭಾಷಣವನ್ನು ಕಾಂಗ್ರೆಸ್ ಟೀಕಿಸಲೇ ಬಳಸಿದ್ದು ವಿಶೇಷವಾಗಿತ್ತು.
ಪ್ರಣಬ್ಗಿತ್ತು ಅರ್ಹತೆ
ರಾಷ್ಟ್ರಪತಿ ಪ್ರಣಬ್ ಅವರಿಗೆ ಪ್ರಧಾನಿಯಾಗುವ ಅರ್ಹತೆ ಇತ್ತು. ಅವರು ಪ್ರಧಾನಿಯಾಗುತ್ತಿದ್ದರೆ ಪರಿಸ್ಥಿತಿಯೇ ಬೇರೆಯಾಗುತ್ತಿತ್ತು. ಆದರೂ ಗಾಂಧಿ ಕುಟುಂಬದ ಹಿತಕಾಯಲು ಮನಮೋಹನ ಸಿಂಗ್ರನ್ನು ಪ್ರಧಾನಿ ಮಾಡಲಾಯಿತು. ಮುಖರ್ಜಿ ಯಶಸ್ವಿಯಾದರೆ ಗಾಂಧಿ ಕುಟುಂಬದ ಕಥೆ ಏನು ಎಂಬ ಆತಂಕ ಕಾಂಗ್ರೆಸ್ಗಿತ್ತು. ಸಿಂಗ್ರನ್ನು ಪ್ರಧಾನಿ ಮಾಡುವ ಮೂಲಕ ಗಾಂಧಿ ಕುಟುಂಬಕ್ಕಾಗಿ ಕುರ್ಚಿ ಕಾಯ್ದಿರಿಸುವಂತೆ ನೋಡಿಕೊಳ್ಳಲಾಯಿತು ಎಂದು ಮೋದಿ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


