ದೇಶ

ಮ್ಯಾಗಝಿನ್ ಮೂಲಕ ಉಗ್ರರಿಗೆ ತರಬೇತಿ

Published On :

ಲಂಡನ್: ಉಗ್ರಗಾಮಿಗಳನ್ನು ತಯಾರಿಸುವ ಪಾಠಶಾಲೆ, ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆ ಅಲ್‌ಖೈದಾ ವೆಬ್‌ಸೈಟ್ ಅಷ್ಟೇ ಅಲ್ಲ ತನ್ನದೇ ಆದ ಮ್ಯಾಗಝಿನ್ ಅನ್ನೂ ಹೊರತರುತ್ತಿದೆ ಎನ್ನುವುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ!
ಇಂಗ್ಲಿಷ್‌ನಲ್ಲಿ ಪ್ರಕಟವಾಗುವ 'ಇನ್‌ಸ್ರೈರ್‌' ಹೆಸರಿನ ಈ ಮ್ಯಾಗಝಿನ್ ಮೂಲಕ ಉಗ್ರಗಾಮಿಗಳಿಗೆ ಸಮಾಜಘಾತುಕ ಕೃತ್ಯಗಳನ್ನು ನಡೆಸುವುದು ಹೇಗೆನ್ನುವ ಕುರಿತೂ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ. ಗುಣಮಟ್ಟದಲ್ಲಿ ಯಾವುದೇ ಫಿಲ್ಮ್ ಮ್ಯಾಗಝಿನ್‌ಗಿಂತ ಕಡಿಮೆ ಇಲ್ಲ ಎಂಬಂತಿರುವ ಈ ಮ್ಯಾಗಝಿನ್‌ನ 10ನೇ ಆವೃತ್ತಿ ಇದೀಗ ಬಿಡುಗಡೆಯಾಗಿದೆ. ಈಗಾಗಲೇ ಇದು ಅನೇಕ ಉಗ್ರರ ಕೈಸೇರಿಯೂ ಆಗಿದೆ. ಯೆಮನ್‌ನಲ್ಲಿ ಮುದ್ರಣವಾಗುತ್ತಿದೆ ಎನ್ನಲಾದ ಈ ಮ್ಯಾಗಝಿನ್‌ನಲ್ಲಿ ಕಾರಿಗೆ ಬೆಂಕಿ ಇಡುವುದು, ವಾಹನ ಅಪಘಾತಗಳನ್ನು ನಡೆಸುವುದು ಹೇಗೆ... ಸೇರಿದಂತೆ ಸಮಾಜಘಾತುಕ ಕೃತ್ಯಗಳನ್ನು ನಡೆಸುವುದು ಹೇಗೆನ್ನುವ ಕುರಿತು ಅನೇಕ ಸಲಹೆ ಸೂಚನೆಗಳಿವೆ. ಈ ಮೂಲಕ ವಿಶ್ವಾದ್ಯಂತ ದೃಷ್ಕೃತ್ಯಗಳಿಗೆ ಅಲ್‌ಖೈದಾ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
4 ಬಾರಿ...: ಈ ಮ್ಯಾಗಝಿನ್ ವರ್ಷಕ್ಕೆ 4 ಬಾರಿ ಪ್ರಕಟವಾಗುತ್ತದೆ. ಇದರ ಪ್ರಮುಖ ಬರಹಗಾರ 26 ವರ್ಷದ ಸಮೀರ್ ಖಾನ್ 2011ರಲ್ಲಿ ಯೆಮೆನ್‌ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಸಾವಿಗೀಡಾಗಿದ್ದ. ಇಷ್ಟಾದರೂ ಈ ಮ್ಯಾಗಝಿನ್ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಹೊರಬರುತ್ತಿದೆ.  ಬಂಧಿತರಾದ ಅನೇಕರು ಈ ಮ್ಯಾಗಝಿನ್ ಹೊಂದಿರುವುದು ಬೆಳಕಿಗೆ ಬಂದಿತ್ತು. ಉಗ್ರ ಕೃತ್ಯಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ ಎನ್ನುವುದು ಈಗಾಗಲೇ ಬಹಿರಂಗವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.