1993ರ ಸ್ಫೋಟ: ಒಂದು ನೋಟ
1993, ಮಾರ್ಚ್ 12. ಮುಂಬೈನಲ್ಲಿ ಸರಣಿ ಸ್ಫೋಟ ಸಂಭವಿಸಿದ ದಿನ. 13 ಸ್ಫೋಟಗಳು ಸಂಭವಿಸಿದ್ದವು.
ಮೊದಲ ಬಾಂಬ್ ಸ್ಫೋಟಿಸಿದ್ದು ಮಧ್ಯಾಹ್ನ 1.30ಕ್ಕೆ. ಬಾಂಬೆ ಸ್ಟಾಕ್ ಏಜೆನ್ಸಿಯ ನೆಲಮಹಡಿಯಲ್ಲಿ ಈ ಸ್ಫೋಟ ಸಂಭವಿಸಿತ್ತು. 1.30 ಯಿಂದ 3.40ರವರೆಗೆ ಮುಂಬೈನ ಹಲವಾರು ಕಡೆಗಳಲ್ಲಿ 13 ಸ್ಫೋಟ ಸಂಭವಿಸಿದ್ದವು. ಮೀನುಗಾರರ ಕಾಲೋನಿಯ ಮಾಹಿಮ್, ಫ್ಲಾಜಾ ಸಿನಿಮಾ, ಝವೇರಿ ಬಜಾರ್, ಕಥಾ ಬಜಾರ್, ಹೊಟೇಲ್ ಸೀ ರಾಕ್, ಹೊಟೇಲ್ ಜುಹು ಸೆಂಟಾರ್, ಏರ್ಇಂಡಿಯಾ ಕಟ್ಟಡ, ಸಹಾರ್ ಏರ್ಪೋರ್ಟ್, ವರ್ಲಿ ಮತ್ತು ಪಾಸ್ಪೋರ್ಟ್ ಆಫೀಸ್
ಬಹುತೇಕ ಬಾಂಬ್ಗಳನ್ನು ಇಟ್ಟಿದ್ದು ಕಾರು ಮತ್ತು ಸ್ಕೂಟರ್ಗಳಲ್ಲಿ. ಹೊಟೇಲ್ಗಳಲ್ಲಿ ಸೂಟ್ಕೇಸ್ನಲ್ಲಿ ಇಡಲಾಗಿತ್ತು.
ಇದರಲ್ಲಿ 257 ಮಂದಿ ಅಸುನೀಗಿದ್ದರು, 700 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. 27 ಕೋಟಿ ನಷ್ಟವಾಗಿತ್ತು.
ಇದು ಪಾಕಿಸ್ತಾನದ ಐಎಸ್ಐನ ಯೋಜಿತ ಸಂಚು ಎಂದೇ ಭಾವಿಸಲಾಗಿದೆ. ದಾವೂದ್ ಇಬ್ರಾಹಿಂ, ಟೈಗರ್ ಮೆಮೋನ್ ಮತ್ತು ಯಾಕುಬ್ ಮೆಮೋನ್ಗೆ ಅದೇ ತರಬೇತಿ ನೀಡಿತ್ತು ಎಂಬುದು ಬಹಿರಂಗವಾಗಿದೆ.
ಇದಕ್ಕೆ ಸ್ಮಗ್ಲರ್ಗಳಾದ ಹಾಜಿ ಅಹ್ಮದ್, ಹಾಜಿ ಉಮರ್, ತೌಫಿಕ್ ಜಲಿಯವಾಲ, ಅಸ್ಲಾಂ ಭಟ್ಟಿ ಮತ್ತು ದಾವೂದ್ ಜಾಟ್ ಹಣಕಾಸಿನ ನೆರವು ನೀಡಿದ್ದರು.
ಸ್ಫೋಟದಲ್ಲಿ ಭಾಗಿಯಾದ ಬಹುತೇಕರು ಬಡವರು. ಇವರಿಗೆ ಬಾಬ್ರಿ ಮಸೀದಿಯನ್ನು ಕೆಡವಿದ ಕ್ರಮಕ್ಕೆ ಸೇಡು ಎಂದು ನಂಬಿಸಿ ಬ್ರೈನ್ ವಾಶ್ ಮಾಡಲಾಗಿತ್ತು.
ದಾಳಿ ನಡೆಸಲು ಪ್ರಮುಖರನ್ನು ಪಾಕಿಸ್ತಾನ ಮತ್ತು ದುಬೈನಲ್ಲಿ ಆರಿಸಲಾಗಿತ್ತು.
ಪೊಲೀಸ್, ಕಸ್ಟಮ್ ಮತ್ತು ಕರಾವಳಿ ರಕ್ಷಣಾ ಪಡೆಯ ಕರ್ತವ್ಯ ಲೋಪವೂ ಘಟನೆಗೆ ಕಾರಣ
ಸಂಜಯ್ ದತ್ ವಿರುದ್ಧ ಭಯೋತ್ಪಾದನಾ ಆರೋಪಗಳಿಲ್ಲ, ಬದಲಾಗಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ಶಿಕ್ಷೆ
ಶರದ್ ಪವಾರ್ ಆಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಇವರು ಕೋಮುಗಲಭೆ ತಪ್ಪಿಸಲು ಹಲವಾರು ತಪ್ಪು ಹೇಳಿಕೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ 100 ಮಂದಿ ದೋಷಿಗಳು ಎಂದು ಸಾಬೀತಾಗಿದೆ. ಆದರೆ ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆಮೋನ್ ಇನ್ನೂ ತಪ್ಪಿಸಿಕೊಂಡಿದ್ದಾರೆ.
ಈ ಪ್ರಕರಣದ ನಂತರ ಮುಂಬೈ ಭೂಗತ ಲೋಕ ಒಡೆಯಿತು. ದಾವೂದ್ನ ಹಿಂದೂ ಸಹಚರರಾದ ಛೋಟಾ ರಾಜನ್ ಮತ್ತು ಸಾಧು ಶೆಟ್ಟಿ ಡಿ - ಕಂಪನಿ ಬಿಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

