ಕಲುಷಿತ ನೀರು: ವಿಶ್ವಾದ್ಯಂತ ಪ್ರತಿದಿನ 1800 ಮಕ್ಕಳ ಸಾವು
ಪ್ರತಿ ದಿನ ಜಗತ್ತಿನಾದ್ಯಂತ 5 ವರ್ಷದ...

ವಿಶ್ವಸಂಸ್ಥೆ: ಪ್ರತಿ ದಿನ ಜಗತ್ತಿನಾದ್ಯಂತ 5 ವರ್ಷದೊಳಗಿನ ಸುಮಾರು 2 ಸಾವಿರ ಮಕ್ಕಳು ಅಸುರಕ್ಷಿತ ನೀರು ಹಾಗೂ ನೈರ್ಮಲ್ಯದ ಕೊರತೆಗೆ ಸಂಬಂಧಿಸಿದ ಅತಿಸಾರದಿಂದ ಸಾವಿಗೀಡಾಗುತ್ತಿದ್ದಾರೆ. ಇವುಗಳಲ್ಲಿ ಶೇ.24ರಷ್ಟು ಸಾವುಗಳು ಭಾರತವೊಂದರಲ್ಲೇ ಸಂಭವಿಸುತ್ತಿವೆ ಎಂದು ವಿಶ್ವಸಂಸ್ಥೆಯ ವರದಿ ಬಹಿರಂಗಪಡಿಸಿದೆ.
ಜಗತ್ತಿನಾದ್ಯಂತ ಆಗುತ್ತಿರುವ 2 ಸಾವಿರ ಮಕ್ಕಳ ಸಾವಿನಲ್ಲಿ ಅರ್ಧದಷ್ಟು ಸಾವು ಭಾರತ, ನೈಜೀರಿಯಾ, ಕಾಂಗೋ ಡೆಮಾಕ್ರಟಿಕ್ ರಿಪಬ್ಲಿಕ್(ಡಿಆರ್‌ಸಿ), ಪಾಕಿಸ್ತಾನ ಮತ್ತು ಚೀನಾದಲ್ಲಿ ಸಂಭವಿಸುತ್ತಿವೆ ಎಂದೂ ಯುನಿಸೆಫ್‌ನ ಮಕ್ಕಳ ಮರಣ ಪ್ರಮಾಣ ವರದಿ ತಿಳಿಸಿದೆ.
ನೈರ್ಮಲ್ಯದ ತೀವ್ರ ಕೊರತೆ: ಸುಧಾರಿತ ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ವಿಶ್ವಾದ್ಯಂತ 78.3 ಕೋಟಿ ಮಂದಿ ವಾಸಿಸುತ್ತಿದ್ದಾರೆ. ಇವರಲ್ಲಿ 9.7 ಕೋಟಿ ಮಂದಿ ಭಾರತೀಯರು. ಜತೆಗೆ, ಭಾರತದಲ್ಲಿ 81.40 ಕೋಟಿ ಜನರು ನೈರ್ಮಲ್ಯದ ತೀವ್ರ ಕೊರತೆ ಅನುಭವಿಸುತ್ತಿದ್ದಾರೆ ಎಂದೂ ವರದಿ ಹೇಳಿದೆ.
ಇದೇ ವೇಳೆ, ವಿಶ್ವಾದ್ಯಂತ ಬರೋಬ್ಬರಿ 1.1 ಶತಕೋಟಿ ಜನ ಈಗಲೂ ಶೌಚಕ್ಕಾಗಿ ಬಯಲನ್ನೇ ಆಶ್ರಯಿಸಿದ್ದಾರೆ. ಇವರಲ್ಲಿ ಅಧಿಕ ಮಂದಿ ಭಾರತೀಯರು. ಇಂತಹ ಬಯಲು ಶೌಚಾಲಯದ ನಿರ್ಮೂಲನೆಯಾಗದೇ ಬಡತನ ನಿರ್ಮೂಲನೆ ಅಸಾಧ್ಯ ಎಂದೂ ವಿಶ್ವಸಂಸ್ಥೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


