ದೇಶ

ಕ್ಷಮೆ ನೀಡಿದರೆ ತಪ್ಪು ಸಂದೇಶ: ಬಿಜೆಪಿ

ಒಂದೆಡೆ ಸಂಜಯ್‌ದತ್‌ಗೆ ಕ್ಷಮಾದಾನ ನೀಡಬೇಕೆನ್ನುವ ಬೇಡಿಕೆ ಹೆಚ್ಚುತ್ತಿದ್ದರೆ...

ಕ್ಷಮೆ ನೀಡಿದರೆ ತಪ್ಪು ಸಂದೇಶ: ಬಿಜೆಪಿ
Published On :

ನವದೆಹಲಿ: ಒಂದೆಡೆ ಸಂಜಯ್‌ದತ್‌ಗೆ ಕ್ಷಮಾದಾನ ನೀಡಬೇಕೆನ್ನುವ ಬೇಡಿಕೆ ಹೆಚ್ಚುತ್ತಿದ್ದರೆ ಇನ್ನೊಂದು ಕಡೆ ಬಿಜೆಪಿ ಹಾಗೂ ಶಿವಸೇನೆ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಇಂಥ ಪ್ರಸ್ತಾಪ ಯಾವುದೇ ಕಾರಣಕ್ಕೂ ಸ್ವೀಕಾರ್ಹವಲ್ಲ ಎಂದು ಅವರು ಹೇಳುತ್ತಿವೆ. 'ಕಾನೂನು ಎಲ್ಲರಿಗೂ ಒಂದೇ. ಸಂಜಯ್‌ದತ್ ಅವರಿಗೆ ಶಿಕ್ಷೆ ವಿಧಿಸಿದ್ದು ದೇಶದ ನ್ಯಾಯಾಂಗ ವ್ಯವಸ್ಥೆ. ಒಂದು ವೇಳೆ ಸಂಜಯ್‌ದತ್ ಅವರಿಗೆ ಕ್ಷಮಾದಾನ ನೀಡಿದರೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಯಾವುದೇ ಹೀನಾಯ ಕೃತ್ಯ ಎಸಗಿದರೂ ತಪ್ಪಿಸಿಕೊಳ್ಳಬಹುದು ಎನ್ನುವ ಭಾವನೆ ಜನರಲ್ಲಿ ಬೆಳೆಯುತ್ತದೆ ಎಂದು ಬಿಜೆಪಿ ಮುಖಂಡ ಬಲಬೀರ್ ಪುಂಜ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕಾಟ್ಜು ಒತ್ತಾಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪುಂಜ್, ಅವರೀಗ ನ್ಯಾಯಾಂಗ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿಲ್ಲ. ಕಾಟ್ಜು ಈಗ ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ. ಹಾಗಾಗಿ ಕಾಟ್ಜು ತಮ್ಮ ಸದ್ಯದ ಕೆಲಸದ ಕುರಿತಷ್ಟೇ ಗಮನಹರಿಸಿದರೆ ಒಳಿತು ಎಂದಿದ್ದಾರೆ. ಈ ಮಧ್ಯೆ,  ಸಂಜಯ್ ದತ್ ಅವರು ದೇಶದ ಕಾನೂನು ಪಾಲಿಸಬೇಕೆಂದು ಶಿವಸೇನೆ ಸಂಸದ ಅನಿಲ್ ದೇಸಾಯಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.