ದೇಶ

ವಾಕ್ WAR

Published On :

ಎಸ್ಪಿ ಮುಖಂಡ ಮುಲಾಯಂ ಸಿಂಗ್ ಯಾದವ್‌ಅವರನ್ನು ಭಯೋತ್ಪಾದಕ ಎಂದು ಕರೆದ ಉಕ್ಕು ಸಚಿವ ಬೇಣಿ ಪ್ರಸಾದ್ ಹೇಳಿಕೆಗೆ ಮುಲಾಯಂ ಅವರು ತಿರುಗೇಟು ನೀಡಿದ್ದು ಹೀಗೆ.

 ಬೇಣಿ ಪ್ರಸಾದ್ ವರ್ಮಾ: ನನ್ನ ಪ್ರಕಾರ ಬಾಬರಿ ಮಸೀದಿ ಕೆಡವಿದ್ದು ಹಾಗೂ ಗುಜರಾತ್ ಹಿಂಸಾಚಾರ ಎರಡೂ ಭಯೋತ್ಪಾದನಾ ಕೃತ್ಯಗಳೇ ಆಗಿವೆ. ಮಸೀದಿ ಕೆಡವಲು ನೆರವಾದ ಕಲ್ಯಾಣ್ ಸಿಂಗ್‌ರಂಥವರ ಜತೆ ಮುಲಾಯಂ ಕೈಜೋಡಿಸಿದ್ದಾರೆ.

 ಮುಲಾಯಂ ಸಿಂಗ್ ಯಾದವ್: ನನ್ನನ್ನು ಉಗ್ರಗಾಮಿ ಎಂದು ಕರೆಯಲಾಗಿದೆ. ನಾನು ಉಗ್ರಗಾಮಿ ಎನ್ನುವುದು ಸಾಬೀತಾದರೆ ನನ್ನನ್ನು ಸರ್ಕಾರ ಜೈಲಿಗೆ ಕಳುಹಿಸಲಿ. ಇಲ್ಲದಿದ್ದರೆ ಬೇಣಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು.

 ನಿತೀಶ್ ಕುಮಾರ್: ಬಿಹಾರದ ಬಗ್ಗೆ ಕೇಂದ್ರ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದರ ಪ್ರತಿಫಲ 2014ರ ಚುನಾವಣೆ ವೇಳೆ ದಕ್ಕಲಿದೆ. ಈಗಲೇ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಿ. ಇಲ್ಲದಿದ್ದರೆ 2014ರಲ್ಲಿ ಅದನ್ನು ನಾವು ಪಡೆದೇ ತೀರುತ್ತೇವೆ.

 ಶಕೀಲ್ ಅಹ್ಮದ್: ವಿಶೇಷ ಸ್ಥಾನಮಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ. ಎನ್‌ಡಿಎ ಅಧಿಕಾರದಲ್ಲಿದ್ದಾಗ ಬಿಹಾರವನ್ನು ಎಷ್ಟು ತುಚ್ಛವಾಗಿ ನೋಡಲಾಯಿತು ಎಂಬುದು ಗೊತ್ತಿಲ್ಲವೇ? ಬಿಜೆಪಿ ನೇತೃತ್ವದ ಮಿತ್ರಪಕ್ಷಗಳು ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡದಂತೆ ಮಾಡಿರಲಿಲ್ಲವೇ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.