ಅಖಿಲೇಶ್ ವಿರುದ್ಧ ಮುಲಾಯಂ ಕಿಡಿ

ಲಖನೌ: ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ಮತ್ತೆ ಪುತ್ರ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಮುಖಂಡ ಎಲ್.ಕೆ. ಆಡ್ವಾಣಿ ಹೇಳಿಕೆಯನ್ನು ಮುಂದಿಟ್ಟುಕೊಂಡು ಆಡಳಿತದಲ್ಲಿ ಬಿಗಿ ತರುವಂತೆ ಪುತ್ರ ಅಖಿಲೇಶ್ಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ರಾಮ್ ಮನೋಹರ್ ಲೋಹಿಯಾ 103ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಲಾಯಂ ಸಿಂಗ್, 'ಉತ್ತರ ಪ್ರದೇಶ ಕೆಟ್ಟ ರಾಜ್ಯ. ಇಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಅವರು ನನ್ನಲ್ಲಿ ವೈಯಕ್ತಿಕವಾಗಿ ದೂರಿದ್ದಾರೆ. ಆಡ್ವಾಣಿಯಂಥ ಹಿರಿಯ ಮುಖಂಡರು ಈ ರೀತಿ ಹೇಳಿದ ಬಳಿಕ ನಾನು ಪರಿಸ್ಥಿತಿಯ ಅವಲೋಕನ ನಡೆಸಬೇಕಾಗಿದೆ. ಆಡ್ವಾಣಿ ಅವರು ಸುಳ್ಳುಹೇಳುವ ವ್ಯಕ್ತಿ ಅಲ್ಲ. ಹಾಗಾಗಿ ನಾನು ಅವರ ಮಾತನ್ನು ಸಂಪೂರ್ಣವಾಗಿ ನಂಬುತ್ತೇನೆ.
ಈ ವಿಚಾರಕ್ಕೆ ಸಂಬಂಧಿಸಿ ನಾನು ಅವರನ್ನು ಮತ್ತೆ ಭೇಟಿಯಾಗುತ್ತೇನೆ' ಎಂದು ಮುಲಾಯಂ ಸಿಂಗ್ ತಿಳಿಸಿದ್ದಾರೆ. ಒಂದು ವೇಳೆ ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಮುಖ್ಯಮಂತ್ರಿ ವಿಫಲವಾದರೆ ಆಡಳಿತ ನಡೆಸಲು ಅಸಮರ್ಥ ಎನ್ನುವ ಹಣೆಪಟ್ಟಿ ಅಖಿಲೇಶ್ಗೆ ಅಂಟಿಕೊಳ್ಳುತ್ತದೆ ಎಂದು ಆಡ್ವಾಣಿ ಹೇಳಿಕೆಯನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಮುಲಾಯಂ ದೂರಿದ್ದಾರೆ. ಈ ನಡುವೆ, ಮುಲಾಯಂ ಅವರು ಉತ್ತರ ಪ್ರದೇಶದ ಸಚಿವರು, ಅಧಿಕಾರಿಗಳ ವಿರುದ್ಧವೂ ಕಿಡಿಕಾರಿದ್ದಾರೆ. ಸಚಿವರು ವೈಯಕ್ತಿಕ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ಮುಖಸ್ತುತಿಯನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರದ ಹೆಸರು ಕೆಡುತ್ತಿದೆ. ಹಾಗಾಗಿ ಅಖಿಲೇಶ್ ಆಡಳಿತ ವಿಚಾರದಲ್ಲಿ ಇನ್ನಷ್ಟು ಕಠಿಣ ಆಗಬೇಕು. ಅಧಿಕಾರಿಗಳಲ್ಲಿ ಭೀತಿ ಮೂಡದಿದ್ದರೆ ಸರ್ಕಾರ ಸರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯ ಇಲ್ಲ ಎಂದು ಮುಲಾಯಂ ಸಲಹೆ ನೀಡಿದ್ದಾರೆ.
ಆಡ್ವಾಣಿ ಎಂದೂ ಸುಳ್ಳು ಹೇಳಲ್ಲ...
ಆಡ್ವಾಣಿ ಅವರೆಂದೂ ಸುಳ್ಳು ಹೇಳಲ್ಲ. ಅವರು ಯಾವತ್ತೂಸತ್ಯವನ್ನೇ ಹೇಳುತ್ತಾರೆ. ಉತ್ತರಪ್ರದೇಶ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ ಹಾಗೂ ಇಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡ ಆಡ್ವಾಣಿ ಸಾಹೇಬ್ ಹೇಳಿದ್ದಾರೆ. ನಾನು ಅವರನ್ನೊಮ್ಮೆ ಕಂಡು ಮತ್ತೆ ಈ ವಿಚಾರದ ಕುರಿತುಮಾತನಾಡುತ್ತೇನೆ.
ಕಾಂಗ್ರೆಸ್ನಿಂದ ಭ್ರಷ್ಟಾಚಾರ: ಇದೇ ವೇಳೆ, ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಕಾರಣ. ಕೇಂದ್ರದಲ್ಲಿರುವುದು ಅಂಜುಬುರುಕ ಸರ್ಕಾರ. ದೇಶದ ಗಡಿ ಕೂಡ ಸುರಕ್ಷಿತವಾಗಿಲ್ಲ ಎಂದೂ ಮುಲಾಯಂ ಅವರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


