ದೇಶ

ಸಲ್ಲು ಸೇರಿ ಐವರು ತಾರೆಯರ ವಿರುದ್ಧ ದೋಷಾರೋಪ

ಸಲ್ಲು ಸೇರಿ ಐವರು ತಾರೆಯರ ವಿರುದ್ಧ ದೋಷಾರೋಪ
Published On :

ಜೋಧ್‌ಪುರ: 14 ವರ್ಷಗಳ ಹಿಂದಿನ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ತಾರೆಗಳಾದ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು, ನೀಲಂ ವಿರುದ್ಧ ಜೋಧ್‌ಪುರ ಕೋರ್ಟ್‌ಲ್ಲಿ ಶನಿವಾರ ಹೊಸದಾಗಿ ದೋಷಾರೋಪ ಸಲ್ಲಿಸಲಾಗಿದೆ.
 ವನ್ಯಮೃಗ ಸಂರಕ್ಷಣೆ ಕಾಯ್ದೆಯ ಅನ್ವಯ ಈ ನಟ, ನಟಿಯರ ವಿರುದ್ಧದ ದೋಷಾರೋಪವನ್ನು ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಚಂದ್ರಕಲಾ ಅವರು ಓದಿ ಹೇಳಿದರು. ಈ ವೇಳೆ, ನಟ ನಟಿಯರು ತಮ್ಮ ವಿರುದ್ಧ ಹೊರಿಸಲಾಗಿರುವ ಆರೋಪವನ್ನು ಅಲ್ಲಗಳೆದರು. ಮುಂದಿನ ವಿಚಾರಣೆಯನ್ನು ಕೋರ್ಟ್ ಏ.27ಕ್ಕೆ ಮುಂದೂಡಿತು.
6 ವರ್ಷ ಜೈಲು?: ಇದೇ ವೇಳೆ, ಸಲ್ಮಾನ್ ಅವರು ಕೂಡ ಕೋರ್ಟ್‌ಗೆ ಹಾಜರಾಗಬೇಕಿತ್ತು. ಅವರು ಅನಾರೋಗ್ಯದ ನೆಪವೊಡ್ಡಿ ಗೈರಾಗಿದ್ದರು. ಶಸ್ತ್ರಾಸ್ತ್ರ ಕಾಯ್ದೆಯನ್ವಯ ಸಲ್ಲು ವಿರುದ್ಧ ಹೊರಿಸಲಾದ ಆರೋಪ ಕೈಬಿಡಲಾಗಿದೆ. ಆರೋಪ ಸಾಬೀತಾದರೆ ಎಲ್ಲ ಆರೋಪಿಗಳೂ 6 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ.
ನಾಳೆ ಕೋರ್ಟ್‌ಗೆ ಸಲ್ಲು ಹಾಜರು: ಇದೇ ವೇಳೆ, 2002ರ ಗುದ್ದೋಡು ಪ್ರಕರಣ ಸಂಬಂಧ ಸಲ್ಮಾನ್ 25ಕ್ಕೆ ಮುಂಬೈನ ಸೆಷನ್ಸ್ ಕೋರ್ಟ್ ಮುಂದೆ ಹಾಜರಾಗಲಿದ್ದಾರೆ. ಶನಿವಾರ ರಾತ್ರಿ ಅಮೆರಿಕದಿಂದ ಮರಳಲಿರುವ ಸಲ್ಲು ಸೋಮವಾರ ಮೊದಲ ಬಾರಿಗೆ ಹಾಜರಾಗಲಿದ್ದಾರೆ. ಇತ್ತೀಚೆಗಷ್ಟೇ ಸಲ್ಲು ವಿರುದ್ಧ ಉದ್ದೇಶಪೂರ್ವಕವಲ್ಲದ ಕೊಲೆ ಆರೋಪ ಹೊರಿಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ಪ್ರಕರಣವನ್ನು ಸೆಷನ್ಸ್ ಕೋರ್ಟ್‌ಗೆ ವರ್ಗಾಯಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.