ಐಟಂ ತಾರೆಯರನ್ನು ವೇಶ್ಯೆ ಎಂದು ಘೋಷಿಸಿ: ನವೀನ್ ತ್ಯಾಗಿ

ತುಂಡುಡುಗೆ ತೊಟ್ಟು...
ಐಟಂ ತಾರೆಯರನ್ನು ವೇಶ್ಯೆ ಎಂದು ಘೋಷಿಸಿ: ನವೀನ್ ತ್ಯಾಗಿ
Updated on

ನವದೆಹಲಿ: ತುಂಡುಡುಗೆ ತೊಟ್ಟು ಡ್ಯಾನ್ಸ್ ಮಾಡುವ ನಟಿಯರನ್ನು ವೇಶ್ಯೆಯರೆಂದು ಪರಿಗಣಿಸಬೇಕು ಎಂದು ಹಿಂದೂ ಮಹಾಸಭಾ ಮುಖಂಡ ನವೀನ್ ತ್ಯಾಗಿ ಒತ್ತಾಯಿಸಿದ್ದಾರೆ.

ಹಿಂದೂ ಮಹಾಸಭಾ ಉತ್ತರಪ್ರದೇಶ ಘಟಕದ ಪ್ರಧಾನ ಕಾರ್ಯದರ್ಶಿ ನವೀನ್ ತ್ಯಾಗಿ ಸಿನಿಮಾಗಳಲ್ಲಿ ಐಟಂ ಸಾಂಗ್‌ನಲ್ಲಿ ಕುಣಿಯುವ ಮತ್ತು ಬಟ್ಟೆ ಬಿಚ್ಚುವ ನಟಿಯರನ್ನು ವೇಶ್ಯೆಯರೆಂದು ಘೋಷಿಸಬೇಕು. ಅಶ್ಲೀಲತೆ ಮೂಲಕ ಹಣ ಸಂಪಾದಿಸುವ ಮಹಿಳೆಯರು ವೇಶ್ಯೆಯರು ಎಂದು ಹೇಳಿದ್ದು, ಈ ಸಂಬಂಧ ತಾನು ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಹತ್ತುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅಷ್ಟೇ ಅಲ್ಲ, ಶಾಲೆಗಳಲ್ಲಿ ಹುಡುಗಿಯರು ಸ್ಕರ್ಟ್ ತೊಡುವುದು, ಜೀನ್ಸ್ ಧರಿಸುವುದನ್ನೂ ನಿಷೇಧಿಸಬೇಕು. ಜೊತೆಗೆ ಹುಡುಗಿಯರ ಕೈಗೆ ಮೊಬೈಲನ್ನು ಕೊಡಬಾರದು ಎಂದು ಹಿಂದೂ ಸಂಘಟನೆಯ ಮುಖಂಡ ಆಗ್ರಹಿಸಿದ್ದಾರೆ.

ನವೀನ್ ತ್ಯಾಗಿಯ ಈ ವಿವಾದಾತ್ಮಕ ಹೇಳಿಕೆಗೆ ಹಿಂದೂ ಮಹಾಸಭಾದ ಮುಖ್ಯಸ್ಥರೇ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ವಕ್ತಾರರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವ್ಯಾಪಕ ಟೀಕೆ
ನವೀನ್ ತ್ಯಾಗಿ ಹೇಳಿಕೆಯು ಕಲುಷಿತ ಮನಃಸ್ಥಿತಿಯ ಸೂಚಕವಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಲಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಂಡುಡುಗೆ ತೊಟ್ಟು ಡ್ಯಾನ್ಸ್ ಮಾಡುವ ಹುಡುಗಿಯರನ್ನು ವೀಕ್ಷಿಸುವ ಪುರುಷರನ್ನು ಏನೆಂದು ಕರೆಯಬೇಕು..? ಎಂದು ಲಲಿತಾ ಪ್ರಶ್ನಿಸಿದ್ದಾರೆ. ಇಂತಹ ಅಸಂಬದ್ಧ ವಿಚಾರಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com