

ಕೊಲಂಬೋ: ಶ್ರೀಲಂಕಾದ ಜಫ್ಫಿನ ಜೈಲಿನಲ್ಲಿರುವ 38 ಭಾರತೀಯ ಮೀನುಗಾರರು ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಜೈಲಿನಿಂದ ತಮ್ಮನ್ನು ಬೇಗ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಭಾರತೀಯ ಮೀನುಗಾರರು ಶ್ರೀಲಂಕಾ ಜೈಲಿನಲ್ಲಿ ಅನಿರ್ದಷ್ಠಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶ್ರೀಲಂಕಾ ಸಮುದ್ರ ಗಡಿ ದಾಟಿದ ಆರೋಪದ ಮೇರೆಗೆ ಈ 38 ಭಾರತೀಯ ಮೀನುಗಾರರನ್ನು ನೌಕಾಪಡೆ ಬಂಧಿಸಿತ್ತು.