ನರೇಂದ್ರ ಮೋದಿ
ನರೇಂದ್ರ ಮೋದಿ

ಮೋದಿ ಮತ್ತೆ ನಂ.1 !

ಟೈಮ್ ನಿಯತಕಾಲಿಕೆ ನಡೆಸುವ ಟೈಮ್ಸ್ ವರ್ಷದ ವ್ಯಕ್ತಿ ಪಟ್ಟಿಯ ಮುಂಚೂಣಿಗೆ...

ವಾಷಿಂಗ್ಟನ್: ಟೈಮ್ ನಿಯತಕಾಲಿಕೆ ನಡೆಸುವ ಟೈಮ್ಸ್ ವರ್ಷದ ವ್ಯಕ್ತಿ ಪಟ್ಟಿಯ ಮುಂಚೂಣಿಗೆ ಪ್ರಧಾನಿ ನರೇಂದ್ರ ಮೋದಿ ಬಂದಿದ್ದಾರೆ.

ಕೆಲ ದಿನಗಳ ಹಿಂದೆ, ಫರ್ಗ್ಯು ಸನ್ ಪ್ರತಿಭಟನಾಕಾರರು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು. ಇದೀಗ, ಪರಿಷ್ಕೃತ ಪಟ್ಟಿ ಹೊರಬಿದ್ದಿದ್ದು, ನರೇಂದ್ರ ಮೋದಿ ಪುನಃ ಅಕ್ರಸ್ಥಾನಕ್ಕೇರಿದ್ದಾರೆ.

ಒಟ್ಟಾರೆ ಮತಗಳಲ್ಲಿ ಶೇ.12.8ರಷ್ಟು ಮತಗಳನ್ನು ಪಡೆದು ಮೊದಲ ಸ್ಥಾನಕ್ಕೆ ಪುನಃ ಏರಿದ್ದರೆ, ಫರ್ಗ್ಯುಸನ್ ಪ್ರತಿಭಟನಾಕರರು ಶೇ.10.1ರಷ್ಟು ಹಾಗೂ ಹಾಂಗ್‌ಕಾಂಗ್ ಪ್ರಜಾಪ್ರಭುತ್ವ ಪರ ಚಳವಳಿ ಶೇ.7.5ರಷ್ಟು ಮತಗಳನ್ನು ಪಡೆದು ಕ್ರಮವಾಗಿ, 2ನೇ ಹಾಗೂ 3ನೇ ಸ್ಥಾನಗಳನ್ನು ಪಡೆದಿವೆ.

ಪಾಕಿಸ್ತಾನದ ಮಲಾಲಾ ಯೂಸುಫ್ ಅವರು ಶೇ.5.2ರಷ್ಟು ಮತ ಗಳಿಸಿ, ಪಟ್ಟಿಯ ನಾಲ್ಕನೇ ಸ್ಥಾನದಲ್ಲಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com