ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು

ಕಾರ್ಪೋರೇಷನ್ ವೃತ್ತದಲ್ಲಿರುವ ಹಾಸ್ಟೆಲ್ ಕಟ್ಟಡದ 2ನೇ...
ಮೃತ ವಿದ್ಯಾರ್ಥಿನಿ ಲಾವಣ್ಯ
ಮೃತ ವಿದ್ಯಾರ್ಥಿನಿ ಲಾವಣ್ಯ

ಬೆಂಗಳೂರು: ಕಾರ್ಪೋರೇಷನ್ ವೃತ್ತದಲ್ಲಿರುವ ಹಾಸ್ಟೆಲ್ ಕಟ್ಟಡದ 2ನೇ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಲಾವಣ್ಯ (19) ಮೃತಪಟ್ಟಿದ್ದಾಳೆ.

ಪಾವಗಡದ ವೈ.ಎನ್.ಹೊಸಕೋಟೆ ಮೂಲದ ಲಾವಣ್ಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ 2ನೇ ವರ್ಷದ ಎಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದಳು. ಭಾನುವಾರ ಮಧ್ಯಹ್ನ 2.30ಕ್ಕೆ ಊಟ ಮುಗಿಸಿ 2 ನೇ ಮಹಡಿಗೆ ಹೋಗಿದ್ದರು.

ಹಾಸ್ಟೆಲ್ ವರಾಂಡ ಬೆಳಕು ಬರಲೆಂದು ಮಹಡಿ ಮೇಲೆ ಹಾಕಲಾಗಿದ್ದ ಫೈಬರ್ ಶೀಟ್ನ ಮೇಲೆ ಆಕಸ್ಮಿಕವಾಗಿ ಕಾಲಿಟ್ಟಾಗ ಶೀಟ್ ಮುರಿದು ಕೆಳಗೆ ಬಿದ್ದಿದ್ದಳು. ಗಾಯಗೊಂಡಿದ್ದ ಅವಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗದಲ್ಲೇ ಕೊನೆಯುಸಿರೆಳೆದಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com