ಮಕ್ಕಳ ಹತ್ಯೆಗೈದ ಇಸಿಸ್

ಮತಾಂತರಗೊಳ್ಳಲು ನಿರಾಕರಿಸಿದರು ಎನ್ನುವ ಒಂದೇ ಕಾರಣಕ್ಕೆ...
ಇಸಿಸ್ ಉಗ್ರರು
ಇಸಿಸ್ ಉಗ್ರರು

ಲಂಡನ್: ಮತಾಂತರಗೊಳ್ಳಲು ನಿರಾಕರಿಸಿದರು ಎನ್ನುವ ಒಂದೇ ಕಾರಣಕ್ಕೆ ಮತಾಂಧ ಇಸಿಸ್ ಉಗ್ರರು ನಾಲ್ಕು ಮಕ್ಕಳನ್ನು ಸಾರ್ವಜನಿಕವಾಗಿ ಹತ್ಯೆ ಮಾಡಿದ ಘಟನೆ ಇರಾಕ್ ರಾಜಧಾನಿ ಬಾಗ್ದಾದ್ ನ ಹೊರವಲಯದಲ್ಲಿ ನಡೆದಿದೆ.

ಇಸಿಸ್ ನಿಯಂತ್ರಣದಲ್ಲಿರುವ ಕ್ರಿಶ್ಚಿಯನ್ನರಿಗೆ ಈ ಹತ್ಯೆ ಸೇರಿದ ಪ್ರದೇಶದಲ್ಲಿ ನಡೆದಿದೆ ಎಂದು ಕೆನಾನ್ ಆ್ಯಂಡ್ರ್ಯೂವೈಟ್ ಎನ್ನುವ ಕ್ರಿಶ್ಚಿಯನ್ ಮುಖಂಡರೊಬ್ಬರು ಈ ಮಾಹಿತಿ ನೀಡಿದ್ದಾರೆ.

ಇಸಿಸ್ ಉಗ್ರರು ಕ್ರಿಶ್ಚಿಚನ್ನರ ಮನೆಗಳಿಗೆ ನುಗ್ಗಿ ಮತಾಂತರಗೊಳ್ಳುವಂತೆ ಬೆದರಿಕೆ ಹಾಕುತ್ತಿದ್ದಾರೆ. ಇದಕ್ಕೆ ಪ್ರತಿರೋಧವೊಡ್ಡಿದರೆ ಸಾರ್ವಜನಿಕರ ಎದುರೇ ಹತ್ಯೆ ನಡೆಸುತ್ತಾರೆ ಎಂದು ವೈಟ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com