ಎರಡು ಪ್ಯಾಸೆಂಜರ್ ರೈಲುಗಳ ನಡುವೆ ಡಿಕ್ಕಿ
ದೇಶ
ಎರಡು ಪ್ಯಾಸೆಂಜರ್ ರೈಲುಗಳ ನಡುವೆ ಡಿಕ್ಕಿ
ಅಪಘಾತ ಅಲ್ಪಪ್ರಮಾಣದಲ್ಲಿ ಸಂಭವಸಿದ್ದರಿಂದ ಯಾವುದೇ ಸಾವು ನೋವುಗಳು ಸಂಭವಸಿಲ್ಲ...
ಪಾಟ್ನ: ಎರಡು ಪ್ಯಾಸೆಂಜರ್ ರೈಲುಗಳ ಮಧ್ಯೆ ಡಿಕ್ಕಿಯಾದ ಘಟನೆ ಬಿಹಾರದ ಪಾಟ್ನಾದಲ್ಲಿ ಸಂಭವಿಸಿದೆ.
ಅಪಘಾತ ಅಲ್ಪಪ್ರಮಾಣದಲ್ಲಿ ಸಂಭವಸಿದ್ದರಿಂದ ಯಾವುದೇ ಸಾವು ನೋವುಗಳು ಸಂಭವಸಿಲ್ಲ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರೈಲ್ವೆ ಮಂಡಳಿಯ ಅಧಿಕಾರಿ ಅರುಣೇಂದ್ರ ಕುಮಾರ್, ಇದು ಎರಡು ಪ್ರಯಾಣಿಕರ ರೈಲುಗಳ ಬದಿಯಲ್ಲಿ ಸಣ್ಣ ಪ್ರಮಾಣದ ಡಿಕ್ಕಿ ಉಂಟಾಗಿದೆ.
ಪ್ಯಾಸೆಂಜರ್ ಎಕ್ಸ್‌ಪ್ರೆಸ್ ಮತ್ತು ಉತ್ತರ ಈಶಾನ್ಯ ಎಕ್ಸ್‌ಪ್ರೆಸ್‌ಗಳು ಡಿಕ್ಕಿಗೆ ಒಳಗಾದ ರೈಲುಗಳಾಗಿವೆ.
ಎರಡು ರೈಲುಗಳಲ್ಲಿ ವೇಗದ ಮಿತಿ ಕಡಿಮೆಯಾಗಿದ್ದರಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ಸಂಭವಿಸಿದಂತಾಗಿದೆ.
ಪಾಟ್ನಾದ ಬದ್ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಘಟನೆ ಸಂಭವಿಸಿದ್ದು, ಈ ಕುರಿತು ರೈಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.

