

ನವದೆಹಲಿ: ದೇಶದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಬೇಟೆಯಾಡಲು ಭಾರತೀಯ ಕಮಾಂಡೋಗಳು ರಹಸ್ಯವಾಗಿ ತೆರಳಿತ್ತು. ಇನ್ನೇನು ಭಾರತೀಯ ಕಮಾಂಡೋಗಳಿಗೆ ದಾವೂದ್ ಸಿಕ್ಕಿ ಬೀಳುತ್ತಾನೆ ಎನ್ನುವಷ್ಟರಲ್ಲಿ ನಿಗೂಢವಾಗಿ ಬಂದ ಫೋನ್ ಕರೆಯೊಂದು ಅವರ ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂಬ ಸತ್ಯ ಹೊರಬಿದದ್ದಿದೆ.
ಕಳೆದ ಒಂದು ವರ್ಷದ ಹಿಂದೆ ಭಾರತೀಯ ಕಮಾಂಡೋಗಳು ದಾವೂದ್ ಇಬ್ರಾಹಿಂನನ್ನು ಮುಗಿಸುವ ಅವಕಾಶ ಪಡೆದಿದ್ದರು. ಆದರೆ ಕೊನೆ ಕ್ಷಣದಲ್ಲಿ ಬಂದ ರಹಸ್ಯ ಕರೆ ಉಗ್ರನ ಬೇಟೆಯನ್ನು ವಿಫಲಗೊಳಿಸಿದೆ.
1993 ರ ಮುಂಬೈ ಸರಣಿ ಸ್ಫೋಟದ ಆರೋಪಿ ದಾವೂದ್ ಪಾಕಿಸ್ತಾನದ ರಕ್ಷಣೆಯಲ್ಲಿದ್ದಾನೆ. ತಲೆ ಮರೆಸಿಕೊಂಡಿರುವ ಉಗ್ರ ದಾವೂದ್‌ನನ್ನು ಪತ್ತೆ ಹಚ್ಚಲು, ದೇಶದ ಗುಪ್ತಚರ ಸಂಸ್ಥೆಗಳು ಪ್ರಯತ್ನಿಸುತ್ತಿವೆ ಆದರೂ, ಪ್ರಯತ್ನ ಮಾತ್ರ ಕೊನೆ ಕ್ಷಣದಲ್ಲಿ ವ್ಯರ್ಥವಾಗುತ್ತಿದೆ.
ಕಳೆದ ವರ್ಷ ಆತ ಭಾರತೀಯ ಕಮಾಂಡೋಪಡೆಗಳಿಂದ ತಪ್ಪಿಸಿಕೊಂಡಾಗ ದೇಶದೊಳಗಿನ ಪ್ರಬಲ ಕೈಗಳೇ ಆತನನ್ನು ರಕ್ಷಿಸಲು ಕಾರ್ಯತ್ಪರವಾಗಿವೆ ಎಂಬುದು ತಿಳಿದು ಬಂದಿದೆ.
ಸೆಪ್ಟೆಂಬರ್ 13, 2013ರಂದು 9 ಕಮಾಂಡೊಗಳು ಉಗ್ರನ ಬೇಟೆಗೆ ರಸ್ತೆ ಬದಿಯಲ್ಲಿ ಸನ್ನದ್ಧರಾಗಿ ನಿಂತರು. ಕಮಾಂಡೊಗಳಿಗೆ ದಾವೂದ್ ಕಾರಿನ ವಿವರಗಳು ಗೊತ್ತಿತ್ತು. ಅಲ್ಲದೇ ಆತನ ಸದ್ಯದ ಚಹರೆ ಕುರಿತ ವಿಡಿಯೋ ಕೂಡ ಇತ್ತು.
ದಾವುದ್ ಬೇಟೆಗೆ ಕ್ಷಣಗಣನೆ ಆರಂಭವಾಯಿತು. ಇನ್ನೇನು ಆತನನ್ನು ಹತ್ಯೆ ಮಾಡಬೇಕೆಂಬುದಷ್ಟರಲ್ಲಿ ನಿಗೂಢ ಕರೆಯೊಂದು ಬಂದು, ಕಾರ್ಯಾಚರಣೆಯನ್ನು ಕೈ ಬಿಡುವಂತೆ ಆದೇಶ ನೀಡಿತು.
ಆದರೆ, ಈ ನಿಗೂಢ ಕರೆ ಯಾರದು, ಏತಕ್ಕೆ ಬಂತು ಎಂಬ ವಿಷಯ ಬಹಿರಂಗವಾಗಿಲ್ಲ.