

ನವದೆಹಲಿ: ಸರಕು ಮತ್ತ ಸೇವಾ ತೆರಿಗೆಗೆ(ಜಿಎಸ್‌ಟಿ) ಸಂಬಂಧಿಸಿ ಸಾಂವಿಧಾನಿಕ ತಿದ್ದುಪಡಿ ವಿಧೇಯಕವನ್ನು ಸಂಪುಟ ಅನುಮೋದನೆ ಮಾಡುವ ಸಾಧ್ಯತೆಗಳಿವೆ.
ಡಿ.23ರಂದು ಕೊನೆಗೊಳ್ಳುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಪ್ರಸ್ತಾಪಿಸಿದ ಹೊಸ ಶಾಸನಕ್ಕೆ ದಾರಿ ಮಾಡಿಕೊಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಜಿಎಸ್‌ಟಿಯಿಂದ ಪೆಟ್ರೋಲಿಯಂ ಅನ್ನು ಸದ್ಯಕ್ಕೆ ಸೇರಿಸಲಾಗುವುದಿಲ್ಲ ಎಂದು ಕೇಂದ್ರ ನಿರ್ಧರಿಸಿದೆ. ಇದರ ಬದಲಿಗೆ ರಾಜ್ಯಗಳು 2016ರ ಏಪ್ರಿಲ್‌ನಿಂದ ಹೊಸ ಪರೋಕ್ಷ ತೆರಿಗೆಗೆ ಸಮ್ಮತಿ ಸೂಚಿಸಬೇಕಿದೆ.
ಹೊಸ ತೆರಿಗೆಯಿಂದ ಆದಾಯದಲ್ಲಿ ನಷ್ಟವಾಗಬಹುದು ಎಂಬ ಭೀತಿಯಿಂದ ಜಿಎಸ್‌ಟಿ ವಿಧೇಯಕ 7 ವರ್ಷಗಳಿಂದ ಮಂಜೂರಿಗಾಗಿ ಕಾಯುತ್ತಿತ್ತು. ಈ ವಿಧೇಯಕ ಅಸ್ತು ಎನಿಸಿಕೊಳ್ಳಬೇಕಾದರೆ ಸಂಸತ್ತು ಅಲ್ಲದೆ, ದೇಶದ ಅರ್ಧದಷ್ಟು ರಾಜ್ಯಗಳಿಂದಲೂ ಸಮ್ಮತಿ ಸಿಗಬೇಕಿದೆ.