ಗರ್ಭಿಣಿ ಪೇದೆಗಳು ವಾಪಸ್

ವಿಧಾನ ಮಂಡಲ ಅಧಿವೇಶನದ ಭದ್ರತೆಗೆ ನಿಯೋಜನೆಗೊಂಡು ಪರದಾಡುತ್ತಿದ್ದ...
ಬಿಜೆಪಿ ಸದಸ್ಯೆ ತಾರಾ
ಬಿಜೆಪಿ ಸದಸ್ಯೆ ತಾರಾ

ವಿಧಾನ ಪರಿಷತ್: ವಿಧಾನ ಮಂಡಲ ಅಧಿವೇಶನದ ಭದ್ರತೆಗೆ ನಿಯೋಜನೆಗೊಂಡು ಪರದಾಡುತ್ತಿದ್ದ ಗರ್ಭಿಣಿ ಪೇದೆಗಳ ಮೇಲೆ ಕೊನೆಗೂ ಸರ್ಕಾರ ಕನಿಕರ ತೋರಿ ಇಲ್ಲಿನ ಕರ್ತವ್ಯದಿಂದ ಬಿಡುಗಡೆ ಮಾಡಿದೆ.

ಸದಸ್ಯೆ ತಾರಾ ಈ ಕುರಿತು ಸರ್ಕಾರದ ಗಮನ ಸೆಳೆದು, ಅಧಿವೇಶನದ ಭದ್ರತೆಗಾಗಿ ನೇಮಿಸಲಾಗದ ಮಹಿಳಾ ಪೊಲೀಸ್ ಪೇದೆಗಳಲ್ಲಿ 7 ಗರ್ಭಿಣಿಯರಿದ್ದಾರೆ. ಅವರಲ್ಲಿ ಒಬ್ಬರು ಚಿಕಿತ್ಸೆಗೆ ದಾಖಲಾಗಿದ್ದಾರೆ.

ಮೂಲಭೂತ ಸೌಲಭ್ಯ ಇಲ್ಲದೆ ಪರಿತಪಿಸುತ್ತಿರುವ ಅವರನ್ನು ತಕ್ಷಣ ವಾಪಸ್ ಕಳುಹಿಸಬೇಕೆಂದು  ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಜಾರ್ಜ್, ಗರ್ಭಿಣಿ ಪೇದೆಗಳಿಗೆ ಸ್ವಂತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಅನಾರೋಗ್ಯಕ್ಕೆ ಒಳಗಾಗಿದ್ದ ಒಬ್ಬರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಉತ್ತರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com