ಅಸ್ಸಾಂನಲ್ಲಿ 10 ಕಚ್ಚಾ ಬಾಂಬ್‌ಗಳು ಪತ್ತೆ

ಇನ್ನೂ 90 ಬಾಂಬ್‌ಗಳು ಹುದುಗಿಸಿಟ್ಟಿರುವ ಬಗ್ಗೆ ಪೊಲೀಸರು ಶಂಕೆ
ಅಸ್ಸಾಂ ವಿಶೇಷ ಪೊಲೀಸ್ ಪಡೆ 10 ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಂಡಿದೆ.
ಅಸ್ಸಾಂ ವಿಶೇಷ ಪೊಲೀಸ್ ಪಡೆ 10 ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಂಡಿದೆ.
Updated on

ಬಾರ್‌ಪೇಟಾ: ಬುರ್ದಾನ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ನೀಡಿದ ಸುಳಿವಿನ ಹಿನ್ನೆಲೆಯಲ್ಲಿ, ಅಸ್ಸಾಂ ವಿಶೇಷ ಪೊಲೀಸ್ ಪಡೆ 10 ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಂಡಿದೆ.

ಈ ಬಾಂಬ್‌ಗಳನ್ನು ಪಟಾರ್ ಕುರ್ಚಿಯ ನಮ್ ಪಾರಾ ಗ್ರಾಮದಲ್ಲಿ ಅಸ್ಸಾಂನ ವಿಶೇಷ ಪೊಲೀಸ್ ದಳ ಇಂದು ವಶಪಡಿಸಿಕೊಂಡಿದೆ.

ಬುರ್ದಾನ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ, ನುರ್ಜಾಲಾಲ್ ಹಕ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವನು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ಮಾಡಿದ ಪೊಲೀಸರು, ಈ ಪ್ರದೇಶದಲ್ಲಿ 10 ಕಚ್ಚಾ ಬಾಂಬುಗಳನ್ನು ಪತ್ತೆ ಹಚ್ಚಿದ್ದಾರೆ.

ಅಲ್ಲದೆ ಇನ್ನೂ 90 ಬಾಂಬ್‌ಗಳು ಹುದುಗಿಸಿಟ್ಟಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಅವುಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

ಬುರ್ದಾನ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾದ ಶಹ್‌ನೂರ್ ಆಲಂನನ್ನು ಅಕ್ಟೋಬರ್ 2 ರಂದು ಬಂಧಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com