ಬಂಗಾಳಿ ಚಿತ್ರ ನಟಿ ಮೇಲೆ ದೈಹಿಕ ಹಲ್ಲೆ

ಬಂಗಾಳಿ ಚಿತ್ರ ನಟಿ ಮೇಲೆ ದೈಹಿಕ ಹಲ್ಲೆ

ಕೋಲ್ಕತಾ: ಬಂಗಾಳಿ ಕಿರುತೆರೆ ನಟಿಯೊಬ್ಬಳಿಗೆ ದುಷ್ಕರ್ಮಿಯೊಬ್ಬ ದೈಹಿಕ ಹಲ್ಲೆ ನಡೆಸಿ ಆಕೆಯ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

34 ವರ್ಷದ ಬಂಗಾಳಿ ಕಿರುತೆರೆ ನಟಿಯೊಬ್ಬಳು ದುಷ್ಕರ್ಮಿಯೊಬ್ಬ ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿ ತನ್ನ ಮೊಬೈಲ್ ಫೋನ್‌ನನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಿನ್ನೆ ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಮನೆಯಿಂದ ಹೊರಗಡೆ ಬಂದಂತಾ ಸಂದರ್ಭದಲ್ಲಿ ವ್ಯಕ್ತಿಯೋರ್ವ ನನ್ನ ತಬ್ಬಿಕೊಳ್ಳಲು ಮುಂದಾಗಿದ್ದ ಈ ವೇಳೆ ತಾನು ಪ್ರತಿಭಟಿಸಿದ್ದರಿಂದ ಆತ ತನ್ನ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ದೂರು ದಾಖಲಿಸಿದ್ದಾಳೆ.

ನಟಿ ದೂರಿನನ್ವಯ ಕೋಲ್ಕತಾ ಪೊಲೀಸರು ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com