

ಗುರ್‌ಗಾಂವ್: ಅಭಿವೃದ್ಧಿ ಪತ್ರಿಕೋದ್ಯಮದ ಹರಿಕಾರ, ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಬೂಬ್ಲಿ ಜಾರ್ಜ್ ವಗೀಸ್(1927-2014) ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ ಒಂದು ತಿಂಗಳ ಹಿಂದೆ ಡೆಂಘಿ ಕಾಣಿಸಿಕೊಂಡಿತ್ತು.
ಮೃತರ ಅಂತ್ಯಕ್ರಿಯೆ ಗುರುವಾರ ನಡೆಯಲಿದೆ. ವರ್ಗೀಸ್ 'ಇಂಡಿಯನ್ ಎಕ್ಸ್‌ಪ್ರೆಸ್', 'ಹಿಂದುಸ್ತಾನ್ ಟೈಮ್ಸ್' ಸಂಪಾದಕರಾಗಿದ್ದರು. ಇಂದಿರಾ ಗಾಂಧಿಗೆ 1966-1969ರ ಅವಧಿಯಲ್ಲಿ ಮಾಧ್ಯಮ ಸಲಹೆಗಾರರಾಗಿದ್ದರು.