

ನವದೆಹಲಿ: ಇನ್ನು ನೀವು ಬಿಂದಾಸ್‌ನಿಂದ ಮೊಬೈಲ್ ಬಳಸಬಹುದು. ಇದರ ಬಳಕೆಯಿಂದ ಕ್ಯಾನ್ಸರ್ ಸೇರಿದಂತೆ ಇತರೆ ಕಾಯಿಲೆಗಳು ಬರುತ್ತೆ ಅನ್ನೋ ಭಯವೂ ಇನ್ನು ಬೇಡ. ಆರೋಗ್ಯದ ಮೇಲೆ ಇದು ಯಾವುದೇ ತರಹದ ಪರಿಣಾಮ ಬೀರುವುದಿಲ್ಲ ಎಂಬದನ್ನು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್‌ಒ) ದೃಢಪಡಿಸಿದೆ.
ಮೊಬೈಲ್ ಬಳಕೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ, ಇಲ್ಲವೇ ಎಂಬ ಬಗ್ಗೆ ಕಳೆದ ಎರಡು ದಶಕಗಳಿಂದ ಹವಾರು ರೀತಿಯ ಸಂಶೋಧನೆಗಳನ್ನು ಮಾಡಲಾಗಿದ್ದು, ದುಷ್ಪರಿಣಾಮ ಬೀರುವ ಸಾಧ್ಯತೆ ತೀರಾ ಕಡಿಮೆ ಎಂಬ ವರದಿ ಲಭ್ಯವಾಗಿದೆ.
ಕ್ಯಾನ್ಸ್‌ರ್‌ನಂಥ ಮಾರಕ ರೋಗ ಸೇರಿದಂತೆ ಮೆದುಳು ಹಾಗೂ ಇತರೆ ಕಾಯಿಲೆಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹಲವಾರು ದೇಶಗಳು ನಂಬಿದ್ದವು. ಆದರೆ, ಇಲ್ಲಿಯವರೆಗೆ ಅಂಥ ಯಾವುದೇ ದುಷ್ಪರಿಣಾಮ ಆಗಿಲ್ಲ. ಭಯ ಬೇಡ ಎಂದು ಸಂಸ್ಥೆ ಹೇಳಿದೆ.