ಆಗಸದಲ್ಲೂ ದರ ಸಮರ

ಭಾರತದಲ್ಲೀಗ ನಾಗರಿಕ ವಿಮಾನಯಾನ ಕಂಪನಿಗಳು ಮತ್ತೊಂದು ಸುತ್ತಿನ ದರ...
ಆಗಸದಲ್ಲೂ ದರ ಸಮರ
Updated on: 

ನವದೆಹಲಿ: ಭಾರತದಲ್ಲೀಗ ನಾಗರಿಕ ವಿಮಾನಯಾನ ಕಂಪನಿಗಳು ಮತ್ತೊಂದು ಸುತ್ತಿನ ದರ ಸಮರ ಆರಂಭಿಸಿವೆ.

ದೇಶದಲ್ಲಿ ಇತ್ತೀಚೆಗಷ್ಟೇ ನಾಗರಿಕ ವಿಮಾನಯಾನ ಸೇವೆ ಆರಂಭಿಸಿರುವ ಏರ್‌ಏಷ್ಯಾ ನಿರ್ದಿಷ್ಟ ಅವಧಿಯ ನಡುವಿನ ಪ್ರಯಾಣದ ಟಿಕೆಟ್‌ಗೆ ರು.380 ದರ ಘೋಷಿಸಿದೆ.

ಜೂ.10 2015ರಿಂದ ಜ.17, 2016ರ ನಡುವಿನ ಪ್ರಯಾಣಕ್ಕಾಗಿ ಇಷ್ಟೊಂದು ಕಡಿಮೆ ದರದಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಆದರೆ, ಟಿಕೆಟ್ ಬುಕ್ ಮಾಡಲು ಮುಂದಿನ ಭಾನುವಾರ ಕೊನೆಯ ದಿನ. ಈ ನಡುವೆ, ಕೆಲವು ಆಯ್ದ ಸ್ಥಳಗಳಿಗೆ ಜೆಟ್ ಏರ್‌ವೇಸ್ ರು.1,973(ಎಕಾನಮಿ ಕ್ಲಾಸ್) ದರ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಸ್ಫರ್ಧಿ ಇಂಡಿಗೋ ಕೂಡ ದರ ಕಡಿತ ಯೋಜನೆ ಪ್ರಕಟಿಸಿದೆ. ಆಯ್ದ ಸ್ಥಳಗಳ ಪ್ರಯಾಣಕ್ಕೆ ರು.1,647 ನಿಗದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com