

ನವದೆಹಲಿ: ಇದನ್ನು ನೀವು ನಂಬಲೇಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ 'ಸಂಸದರ ಮಾದರಿ ಗ್ರಾಮ ಯೋಜನೆ' ಅನ್ವಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗ್ರಾಮವೊಂದನ್ನು ದತ್ತು ತೆಗೆದುಕೊಂಡಿದ್ದಾರೆ.
ಮೋದಿಯನ್ನು ಹಾಗೂ ಅವರ ಯೋಜನೆಗಳನ್ನು ಟೀಕಿಸುತ್ತಾ ಬಂದಿರುವ ಕಾಂಗ್ರೆಸ್ ಈಗ ಅವರದ್ದೇ ಯೋಜನೆಯನ್ನು ಪಾಲಿಸುವ ಮೂಲಕ ಅಚ್ಚರಿ ಮೂಡಿಸಿದೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ತಮ್ಮ ಕ್ಷೇತ್ರವಾದ ರಾಯ್‌ಬರೇಲಿಯ ಉದ್ವ ಎಂಬ ಗ್ರಾಮವನ್ನು ಶುಕ್ರವಾರ ದತ್ತು ಪಡೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಗ್ರಾಮ ದತ್ತು ತೆಗೆದುಕೊಳ್ಳುವುದು ಎಂದರೆ ಎನ್‌ಡಿಎ ಸರ್ಕಾರವನ್ನು ಸಮರ್ಥಿಸಿಕೊಂಡಂತೆ ಅಲ್ಲ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಎಲ್ಲ ಸಂಸಂದರು ಉದ್ಯೋಗ ಖಾತ್ರಿ, ರಾಜೀವ್ ಆವಾಸ್ ಯೋಜನೆಯನ್ವಯ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದರು ಎಂದಿದೆ.