

ನವದೆಹಲಿ: ಪತಿ ಮತ್ತು ಪತಿಯ ಕುಟುಂಬದವರ ವಿರುದ್ಧ ಸುಳ್ಳು ವರದಕ್ಷಿಣೆ ಕೇಸು ದಾಖಲಿಸಬೇಕಾದ್ರೆ ಸ್ವಲ್ಪ ಯೋಚಿಸಿ.
ಏಕೆಂದರೆ, ಸುಳ್ಳು ವರದಕ್ಷಿಣೆ ಕೇಸು ದಾಖಲಿಸಿದ್ರೆ, ಗಂಡನಿಗೆ ವಿಚ್ಛೇದನ ನೀಡಲು ಅರ್ಹತೆಯಿದೆಯಂತೆ.
ಹೌದು, ಪತ್ನಿ ದಾಖಲಿಸಿರುವ ವರದಕ್ಷಿಣೆ ಪ್ರಕರಣ ಸುಳ್ಳಾದರೇ, ಗಂಡ ಆಕೆಗೆ ವಿಚ್ಛೇದನೆ ನೀಡುವ ಅರ್ಹತೆ ಹೊಂದಿರುತ್ತಾನೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇತ್ತೀಚೆಗೆ ಸುಳ್ಳು ವರದಕ್ಷಿಣೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿರಪರಾಧಿ ಪತಿ ಮತ್ತು ಕುಟುಂಬಸ್ಥರ ವಿರುದ್ಧ ಪತ್ನಿಯರು ಸುಳ್ಳು ಪ್ರಕರಣಗಳು ದಾಖಲಿಸಿಸುತ್ತಿದ್ದಾರೆ. ಇದರಿಂದ ಕಾನೂನು ದುರಪಯೋಗವು ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸುಳ್ಳು ಪ್ರಕರಣ ದಾಖಲಿಸುವವರಿಗೆ ಒಂದು ಶಾಕ್ ನೀಡಿದೆ.
ಸೆಕ್ಷನ್ 498ಎ ಅಡಿ ಪತಿ ಮತ್ತು ಪತಿಯ ಕುಟುಂಬದವರ ವಿರುದ್ಧ ದಾಖಲಾಗಿರುವ ವರದಕ್ಷಿಣೆ ಪ್ರಕರಣ ಸುಳ್ಳು ಎಂದು ಸಾಬೀತಾದರೆ, ಆಗ ಪತಿ ಪತ್ನಿಗೆ ವಿಚ್ಛೇದನ ನೀಡಹುದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಪತಿಗೆ ವಿಚ್ಛೇದನೆ ನೀಡದೆ, ಪತಿಯ ವಿರುದ್ಧ ಸೇಡು ತೀರಿಸಿಕೊಳ್ಳಲೆಂದೇ, ಪತ್ನಿ ಬೇಕಂತಲೇ ವರದಕ್ಷಿಣೆ ಕಿರುಕುಳ, ದೈಹಿಕ ಹಲ್ಲೆ ಸೇರಿದಂತೆ ಇತರೆ ಪ್ರಕರಣಗಳನ್ನು ದಾಖಲಿಸಿ, ಅದು ಸುಳ್ಳು ಎಂದು ಸಾಬೀತಾದರೆ, ಪತಿ ವಿಚ್ಛೇಧನ ನೀಡಲು ಅವಕಾಶ ಇರುತ್ತದೆ. ಇದಕ್ಕೆ ಪತ್ನಿಯ ಆಕ್ಷೇಪ ಅಗತ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ವಿಚ್ಛೇಧನ ಪ್ರಕರಣ ಇತ್ಯರ್ಥಗೊಳಿಸಿ ಎಂದು ಕೆ ಶ್ರೀನಿವಾಸ್ ಮತ್ತು ಕೆ.ಸುನಿತಾ ದಂಪತಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ.
ಕೆ.ಸುನಿತಾ ಕಾನೂನನ್ನು ದುರಪಯೋಗ ಪಡಿಸಿಕೊಂಡು, ತನ್ನ ಪತಿ ಮತ್ತು ಪತಿಯ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು. ಆದರೆ, ಇದು ಸುಳ್ಳು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಾಬೀತಾಗಿದೆ. ಇದಕ್ಕೆ ವಿಷಾಧ ವ್ಯಕ್ತಪಡಿಸಿರುವ ಸುಪ್ರೀಂ, ಇನ್ನೂ ಮುಂದೆ ಸುಳ್ಳು ಆರೋಪದಡಿ ವರದಕ್ಷಿಣೆ ಕೇಸು ದಾಖಲಿಸಿದರೆ, ಅಂತಹವರಿಗೆ ಗಂಡಂದಿರು ವಿಚ್ಚೇದನ ನೀಡುವ ಅರ್ಹತೆ ಹೊಂದಿರುತ್ತಾರೆ ಎಂದು ಸುಪ್ರೀಂ ಹೇಳಿದೆ.