

ವಾಷಿಂಗ್ಟನ್: ಪಾಕಿಸ್ತಾನದ ಅಣ್ವಸ್ತ್ರ ಯೋಜನೆ ಇಡೀ ವಿಶ್ವಕ್ಕೇ ಆಂತಕಕಾರಿ ಎನ್ನುವ ವಿಚಾರ ಮತ್ತೊಮ್ಮೆ ಬಹಿರಂಗವಾಗಿದೆ.
2020ರ ವೇಳೆಗೆ 200 ಅಣ್ವಸ್ತ್ರಗಳನ್ನು ನಿರ್ಮಿಸುವಷ್ಟು ಸಾಮಗ್ರಿಗಳು ಪಾಕಿಸ್ತಾನದ ಬಳಿ ಇವೆ ಎಂದು ಅಮೆರಿಕದ ಮಿಲಿಟರ್ ತಜ್ಞರೊಬ್ಬರು ಹೇಳಿದ್ದಾರೆ.
ಭಾರತದ ಬಳಿ 90ರಿಂದ 110 ಅಣ್ವಸ್ತ್ರ ನಿರ್ಮಿಸುವಷ್ಟು ಸಾಮಗ್ರಿಗಳು ಇದೆ. ಚೀನಾವು ಈಗಾಗಲೇ 250 ಅಣ್ವಸ್ತ್ರಗಳನ್ನು ಹೊಂದಿದೆ. ವಿಶ್ವದ ಐದು ಮುಂದುವರಿದ ರಾಷ್ಟ್ರಗಳಲ್ಲಿ ಚೀನಾವಷ್ಟೇ ಅಣ್ವಸ್ತ್ರಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಅನೇಕ ರಾಷ್ಟ್ರಗಳು ತಮ್ಮ ಬಳಿ ಇರುವ ಅಣ್ವಸ್ತ್ರಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿದ್ದರೆ ಏಷ್ಯಾದ ರಾಷ್ಟ್ರಗಳು ಮಾತ್ರ ಅಣ್ವಸ್ತ್ರ ರೇಸ್ನಲ್ಲಿ ನಿರತವಾಗಿವೆ.