43 ರಾಷ್ಟ್ರಗಳಿಗೆ ಇ-ವಿಸಾ ಇಂದಿನಿಂದ

ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ 43 ರಾಷ್ಟ್ರಗಳಿಗೆ ಗುರುವಾರದಿಂದ...
43 ರಾಷ್ಟ್ರಗಳಿಗೆ ಇ-ವಿಸಾ ಇಂದಿನಿಂದ

ನವದೆಹಲಿ: ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ 43 ರಾಷ್ಟ್ರಗಳಿಗೆ ಗುರುವಾರದಿಂದ ವೀಸಾ ಆನ್ ಅರೈವಲ್ ಸೌಲಭ್ಯ ಸಿಗಲಿದೆ.

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಅಮೆರಿಕ ಮತ್ತು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ ಸೌಲಭ್ಯ ಘೋಷಣೆ ಮಾಡಿದ್ದರು.

ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಪ್ರವಾಸೋದ್ಯಮ ಸಚಿವ ಡಾ.ಮಹೇಶ್ ಶರ್ಮಾ ದೆಹಲಿಯಲ್ಲಿ ಈ ಸೌಲಭ್ಯ ಉದ್ಘಾಟಿಸಲಿದ್ದಾರೆ.

ಪಾಕಿಸ್ತಾನ, ಸುಡಾನ್, ಇರಾನ್, ಇರಾಕ್, ಶ್ರೀಲಂಕಾ ಮತ್ತು ಸೋಮಾಲಿಯಾ ದೇಶಗಳಿಗೆ ಮುಂದಿನ ಹಂತದಲ್ಲಿ ಈ ಸೌಲಭ್ಯ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com