

ನವದೆಹಲಿ: ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 91 ಪೈಸೆ ಇಳಿಕೆಯಾಗಿದ್ದು, ಡೀಸೆಲ್ ದರದಲ್ಲಿ ಕೂಡ 84 ಪೈಸೆ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಇದರ ಪರಿಣಾಮ ಭಾರತೀಯ ತೈಲ ಮಾರುಕಟ್ಟೆಯ ಮೇಲೂ ಬೀರಿದೆ. ಹೀಗಾಗಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 91 ಪೈಸೆ ಇಳಿಕೆಯಾಗಿದ್ದು, ಡೀಸೆಲ್ ದರದಲ್ಲಿ ಕೂಡ 84 ಪೈಸೆಯಷ್ಟು ಇಳಿಕೆ ಕಂಡುಬಂದಿದೆ.
ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.