ಫ್ರಾನ್ಸ್ ನಲ್ಲಿ ಕ್ಯಾಟ್‍ವಾಕ್ ಮಾಡಿದ್ರೆ ಜೈಲು!

ಬಾಲಿವುಡ್ ಬೆಡಗಿಯರು ಮತ್ತು ಮಾಡೆಲ್ ಲೋಕದ ಬೆಡಗಿಯರು ಫ್ಯಾಷನ್‍ಗಾಗಿ ಝೀರೋ ಸೈಜ್ ಫಿಗರ್ (ತೆಳ್ಳೆನೆಯ, ಬಳುಕಿನ ದೇಹ) ಬೇಕೆಂದು...
ಮಾಡೆಲ್ ಲೋಕದ ಬೆಡಗಿಯರು
ಮಾಡೆಲ್ ಲೋಕದ ಬೆಡಗಿಯರು

ಪ್ಯಾರಿಸ್: ಬಾಲಿವುಡ್ ಬೆಡಗಿಯರು ಮತ್ತು ಮಾಡೆಲ್ ಲೋಕದ ಬೆಡಗಿಯರು ಫ್ಯಾಷನ್‍ಗಾಗಿ ಝೀರೋ ಸೈಜ್ ಫಿಗರ್ (ತೆಳ್ಳೆನೆಯ, ಬಳುಕಿನ ದೇಹ) ಬೇಕೆಂದು ಡಯಟ್  ಮಾಡುತ್ತಾರೆ. ಏನೇನೋ ಥೆರಪಿಗಳಿಗೆ ಮೊರೆ ಹೋಗುತ್ತಾರೆ. ಅವರೆಲ್ಲ ಓದಿ ತಿಳಿಯ ಬೇಕಾದ ಸುದ್ದಿ ಫ್ರಾನ್ಸ್ ನಲ್ಲಿ ನಡೆದಿದೆ. ಅಲ್ಲಿ ಇನ್ನು ಮುಂದೆ ಫ್ಯಾಷನ್‍ ಶೋ ಪ್ರಯುಕ್ತ ನಡೆಯುವ ಕ್ಯಾಟ್‍ವಾಕ್‍ನಲ್ಲಿ ಝೀರೋ ಸೈಜ್ ಫಿಗರ್  ಇರುವ ಲಲನೆಯರು ಭಾಗವಹಿಸುವಂತೆ ಇಲ್ಲವೇ ಅಲ್ಲ. ಅದಕ್ಕೆ ನಿಷೇಧ ಹೇರಲಾಗಿದೆ. ಇಂಥ ಕಾನೂನಿಗೆ ಫ್ರಾನ್ಸ್ ಸಂಸತ್‍ನ ಕೆಳಮನೆಯಲ್ಲಿ ಅಂಗೀಕಾರ ದೊರಕಿದೆ. ಇಂಥ ಕ್ರಮಕ್ಕೆಫ್ರಾನ್ಸ್ ನಲ್ಲಿರುವ ಫ್ಯಾಷನ್‍ ಲೋಕದ ದಿಗ್ಗಜರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಏಕೆಂದರೆ ವಿಶ್ವದ ಫ್ಯಾಷನ್‍ ರಾಜಧಾನಿಯೆಂದರೆ ದರೆ ಪ್ಯಾರಿಸ್!
ಕಾನೂನು ಉಲ್ಲಂಘಿಸಿದರೆ ಜೈಲು: ಇಂಥ ಕಾನೂನು ಉಲ್ಲಂಘಿಸಿ ನಡೆದರೆ ಶಿಕ್ಷೆಯೂ ಇದೆ. ಕನಿಷ್ಠ 6 ತಿಂಗಳು ಮತ್ತು ರು. 52 ಲಕ್ಷ ದಂಡ ವಿಧಿಸಲಾಗುತ್ತದೆ. ಹೊಸ ಕಾನೂನಿನ ಪ್ರಕಾರ ಬೆಡಗಿಯರ ತೂಕ ನಿಗದಿಗಿಂತಲೂ ಕಡಿಮೆಯಿದ್ದರೆ ಅಂಥವರನ್ನು ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡುವುದನ್ನೇ ನಿಷೇಧಿಸಿದೆ. ಪ್ಯಾರಿಸ್‍ನ ಈ ಕಾನೂನನ್ನು ಸ್ಪೇನ್, ಇಟಲಿ ಮತ್ತು ಇಸ್ರೇಲ್‍ನಲ್ಲಿಯೂ ಸಹ ಅಳವಡಿಸಿಕೊಂಡಿದೆ. ಏಕೆ ಈ ಕಾನೂನು?: ಹದಿಹರೆಯದ ವಯಸ್ಸಿನಲ್ಲಿ ಮಾಡೆಲ್ ಜಗತ್ತಿಗೆ ಬರುವ ಬೆಡಗಿಯರು, ಸಪೂರ ದೇಹ ಪಡೆಯುವ ಸಲುವಾಗಿ ಸರಿಯಾಗಿ ಆಹಾರ ಸೇವಿಸು ವುದಿಲ್ಲ. 35 ವರ್ಷ ದಾಟಿದ ಬಳಿಕ ಆರೋಗ್ಯದ ಮೇಲೆ
ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ಅನಿವಾರ್ಯವಾಗಿ ಹೊಸ ಕಾನೂನನ್ನು ಅಳವಡಿಸಿಕೊಳ್ಳಬೇಕಾಗಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com