

ರಾಮೇಶ್ವರಂ: ಲಂಕಾಗೆ ಸೇರಿದ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 33 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯ ಅಧಿಕಾರಿಗಳು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
ನಿಡೆಂತೀವು ಬಳಿ ಜಲಗಡಿ ಉಲ್ಲಂಘಿಸಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಮೀನುಗಾರರನ್ನು ಬಂಧಿಸಿದ್ದು, ಬಂಧಿತ ಮೀನುಗಾರರಲ್ಲಿ ಹೆಚ್ಚಿನವರು ನಾಗಪಟ್ಟಣಂ ಜಿಲ್ಲೆಗೆ ಸೇರಿದವರು.
ಬಂಧಿತರಿಂದ 5 ಬೋಟುಗಳನ್ನು ಲಂಕಾ ನೌಕಾಪಡೆ ವಶಕ್ಕೆ ಪಡೆದಿದೆ. ನಂತರ ಇವರನ್ನು ಜಾಫ್ನಾ ಜಿಲ್ಲೆಯ ಬಂದರು ಪಟ್ಟಣ ಕಂಗೆಸಂತುರೈಗೆ ಕರೆದೊಯ್ಯಲಾಗಿದೆ ಎಂದು ನಾಗಪಟ್ಟಣಂ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸುಬ್ಬುರಾಜ್ ತಿಳಿಸಿದ್ದಾರೆ.