20 ವರ್ಷಗಳ ಕಾಲ ಬೇಹುಗಾರಿಕೆ: ಬೋಸ್ ಕುಟುಂಬದಿಂದ ನಾಳೆ ಪ್ರಧಾನಿ ಭೇಟಿ

ಬರೋಬ್ಬರಿ 20 ವರ್ಷಗಳ ಕಾಲ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಬಗ್ಗೆ ಮಾಜಿ ಪ್ರಧಾನಿ ದಿ.ಜವಾಹರ್ ಲಾಲ್ ನೆಹರು ಅವರು ಗೂಢಚಾರಿಕೆ ನಡೆಸಿದ್ದರು....
ಸುಭಾಷ್ ಚಂದ್ರ ಬೋಸ್
ಸುಭಾಷ್ ಚಂದ್ರ ಬೋಸ್
Updated on: 

ಕೊಲ್ಕತಾ: ಬರೋಬ್ಬರಿ 20 ವರ್ಷಗಳ ಕಾಲ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಬಗ್ಗೆ ಮಾಜಿ ಪ್ರಧಾನಿ ದಿ.ಜವಾಹರ್ ಲಾಲ್ ನೆಹರು ಅವರು ಗೂಢಚಾರಿಕೆ ನಡೆಸಿದ್ದರು ಎಂಬ ವರದಿ ಪ್ರಕಟವಾದ ಮಾರನೇ ದಿನವೇ, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವುದಾಗಿ ಬೋಸ್ ಕುಟುಂಬದ ಸದಸ್ಯರು ಶನಿವಾರ ಹೇಳಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ನೇತಾಜಿ ಸಹೋದರ ಮೊಮ್ಮಗ ಚಂದ್ರಕುಮಾರ್ ಬೋಸ್ ಅವರು, ನೆಹರು ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವ ಕಾರಣಕ್ಕಾಗಿ ನಮ್ಮ ಕುಟುಂಬದ ಬಗ್ಗೆ ಗೂಢಚಾರಿಕೆ ನಡೆಸಿತು ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ ಎಂದಿದ್ದಾರೆ. ಅಲ್ಲದೆ ಇದೊಂದು ಆಘಾತಕಾರಿ ಸಂಗತಿ ಎಂದಿರುವ ಅವರು ಈ ಕುರಿತು ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ಹಮ್ಬರ್ಗ್ನಲ್ಲಿ ನೆಲೆಸಿರುವ ಬೋಸ್ ಅವರ ಸಹೋದರ ಸೂರ್ಯ ಬೋಸ್ ಅವರು ನಾಳೆ ಬರ್ಲಿನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಕುಟುಂಬದ ವಕ್ತಾರರು ತಿಳಿಸಿದ್ದಾರೆ. ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ನಾಳೆ ಜರ್ಮನಿಗೆ ಭೇಟಿ ನೀಡಲಿದ್ದಾರೆ.

1948ರಿಂದ 1968ರ ವರೆಗೆ ನೇತಾಜಿಯ ಕುಟುಂಬ ಹಾಗೂ ಸಂಬಂಧಿಕರ ಬೆಗಗಿನ ಎಲ್ಲ ಮಾಹಿತಿಗಳನ್ನು ಬೇಹುಗಾರಿಕೆ ಮೂಲಕ ಕಾಂಗ್ರೆಸ್ ಸರ್ಕಾರ ಸಂಗ್ರಹಿಸುತ್ತಿತ್ತು. ಕುಟುಂಬ ಸದಸ್ಯರು ಬರೆಯುತ್ತಿದ್ದ ಪತ್ರಗಳು ಆಯಾ ವ್ಯಕ್ತಿಗಳನ್ನು ತಲುಪುವ ಮೊದಲೇ ಸರ್ಕಾರಕ್ಕೆ ಸಿಗುತ್ತಿತ್ತು. ಬೋಸ್ ಕುಟುಂಬಸ್ಥರು ಯಾವ್ಯಾವ ಪ್ರದೇಶಗಳಿಗೆ, ಯಾವ್ಯಾವ ರಾಷ್ಟ್ರಗಳಿಗೆ ಹೋದರು, ಅಲ್ಲಿ ಯಾರ್ಯಾರನ್ನು ಭೇಟಿಯಾದರು ಎಂಬೆಲ್ಲ ವಿವರಗಳು ನೆಹರು ಅವರ ಕೈ ಸೇರುತ್ತಿತ್ತು ಎಂದು ನಿನ್ನೆ ಇಂಡಿಯಾ ಟುಡೇ ವರದಿ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com