16 ವರ್ಷದ ಅಪ್ರಾಪ್ತೆ ಮೇಲೆ ಅಪ್ಪ, ಚಿಕ್ಕಪ್ಪ, ಅಣ್ಣನಿಂದಲೇ ಸತತ 2 ವರ್ಷ ಅತ್ಯಾಚಾರ

16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ತಂದೆ, ಚಿಕ್ಕಪ್ಪ ಹಾಗೂ ಅಣ್ಣ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಪಶ್ಚಿಮ ಬಂಗಾಳ ಜಲ್ಪೈಗುರಿ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಲ್ಪೈಗುರಿ: 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ತಂದೆ, ಚಿಕ್ಕಪ್ಪ ಹಾಗೂ ಅಣ್ಣ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಪಶ್ಚಿಮ ಬಂಗಾಳ ಜಲ್ಪೈಗುರಿ ಜಿಲ್ಲೆಯಲ್ಲಿ ನಡೆದಿದೆ.

ಈ ಸಂಬಂಧ ಬಾಲಕಿ ಧುಪ್ಗುರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ತಂದೆ, ಚಿಕ್ಕಪ್ಪ ಹಾಗೂ ಅಣ್ಣ ಈ ಮೂವರೂ ಸುಮಾರು ಎರಡು ವರ್ಷಕ್ಕೂ ಹೆಚ್ಚು ಕಾಲ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಪರಿಣಾಮ ಎರಡು ಬಾರಿ ಗರ್ಭಿಣಿಯೂ ಆಗಿದ್ದು, ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿಸಿದ್ದಾಳೆ. ಇಷ್ಟೆಲ್ಲಾ ಆದರೂ ತಾಯಿ ತನ್ನ ಸಹಾಯಕ್ಕೆ ಬಂದಿಲ್ಲ ಎಂದು ಬಾಲಕಿ ದೂರಿದ್ದಾಳೆ.

ಮಗಳ ಸಹಾಯಕ್ಕೆ ಬಾರದ ತಾಯಿ, ಅವರು ನಿನ್ನ ತಂದೆ, ಚಿಕ್ಕಪ್ಪ ಹಾಗೂ ಅಣ್ಣನೇ ಹೊರತು, ಬೇರೆ ಯಾರೋ ದಾರಿಹೋಕರಲ್ಲ ಎಂದು ಬಾಯಿ ಮುಚ್ಚಿಸಿದ್ದಳಂತೆ!

ಕಡೆಗೂ ಬಾಲಕಿ ಗಟ್ಟಿ ಮನಸು ಮಾಡಿ, ತನ್ನ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರದ ಕುರಿತು ಗುರುವಾರ ತನ್ನ ಶಾಲಾ ಶಿಕ್ಷಕರೊಬ್ಬರ ಬಳಿ ಹೇಳಿಕೊಂಡಿದ್ದಾಳೆ. ಶಾಲಾ ಶಿಕ್ಷಕರು ಬಾಲಕಿಯನ್ನು ಧುಪ್ಗುರಿ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ಕೊಡಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಾಮುಕ ಅಪ್ಪ, ಚಿಕ್ಕಪ್ಪ ಹಾಗೂ ಅಣ್ಣನನ್ನು ಬಂಧಿಸಿದ್ದಾರೆ. ಅಲ್ಲದೆ ತಲೆಮರೆಸಿಕೊಂಡಿರುವ ಬಾಲಕಿಯ ತಾಯಿಗಾಗಿ ಶೋಧ ನಡೆಸುತ್ತಿದ್ದಾರೆ. ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com