

ನವದೆಹಲಿ: ಶೈಕ್ಷಣಿಕವಾಗಿ ಇತರೆ ವಿದ್ಯಾರ್ಥಿಗಳಿಗಿಂತ ಹಿಂದುಳಿದಿದ್ದ ಕಾರಣ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮೂರನೇ ಅಂತಸ್ತಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ನವದೆಹಲಿಯ ದೆಹಲಿ ವಿಶ್ವವಿದ್ಯಾಲಯದ ಖಾಲ್ಸಾ ಕಾಲೇಜಿನಲ್ಲಿ ದ್ವಿತೀಯ ಬಿ ಟೆಕ್ ವ್ಯಾಸಂಗ ಮಾಡುತ್ತಿದ್ದ ಹರಿಯಾಣದ ಫರೀದಾಬಾದ್ ಮೂಲದ 20ರ ಹರೆಯ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು, ಕಾಲೇಜಿನ ಮೂರನೇ ಅಂತಸ್ಥಿನಿಂದ ಜಿಗಿದಿದ್ದಾಳೆ. ಸದ್ಯ ಆಕೆಯ ಕಾಲು ಮೂಳೆ ಮುರಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೈಕ್ಷಣಿಕವಾಗಿ ಇತರೆ ವಿದ್ಯಾರ್ಥಿಗಳಿಗಿಂತ ಹಿಂದುಳಿದಿದ್ದ ಕಾರಣ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿನಿ ಡೆಟ್ ನೋಟ್ ಬರೆದಿಟ್ಟು ನಂತರ ಕಾಲೇಜಿನ ಕಂಪ್ಯೂಟರ್ ವಿಭಾಗದ ಕಟ್ಟಡದ ಮೂರನೇ ಅಂತಸ್ತಿಗೆ ತೆರಳಿ ಇತರೆ ವಿದ್ಯಾರ್ಥಿಗಳು ನೋಡನೋಡುತ್ತಿದ್ದಂತೆಯೇ ಅಲ್ಲಿಂದ ಕೆಳಗೆ ಧುಮುಕಿದ್ದಾಳೆ ಎಂದು ಪೊಲೀಸ್ ಉಪ ಆಯುಕ್ತರಾದ ಮಧುರ್ ವರ್ಮಾ ಅವರು ಹೇಳಿದ್ದಾರೆ.
ಸುಮಾರು 1 ಗಂಟೆ ಸುಮಾರಿನಲ್ಲಿ ಆಕೆ ಕಟ್ಟಡದಿಂದ ಹಾರಿದ್ದು, ಕೂಡಲೇ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿಯನ್ನು ಬರ ಹಿಂದೂ ರಾವ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದು, ಕಾಲಿನ ಮೂಳೆ ಮುರಿತಕ್ಕೊಳಗಾಗಿರುವ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಯುವತಿ ವಿದೇಯಕ ವಿದ್ಯಾರ್ಥಿನಿಯಾಗಿದ್ದು, ಓದಿನಲ್ಲೂ ಮುಂದಿದ್ದಲು. ಎರಡನೇ ಸೆಮಿಸ್ಟರ್ ನಲ್ಲಿ ಆಕೆ ಪ್ರತಿಶತ 75 ರಷ್ಟು ಅಂಕ ಪಡೆದಿದ್ದಳು ಎಂದು ಕಾಲೇಜು ಪ್ರಿನ್ಸಿಪಲ್ ಜಸ್ವಿಂದರ್ ಸಿಂಗ್ ಹೇಳಿದ್ದಾರೆ.