ನೇಪಾಳ ಸಂತ್ರಸ್ತರ ಆರ್ಥಿಕ ನೆರವಿಗೆ ಮುಂದಾದ ಫೇಸ್ ಬುಕ್

ನೇಪಾಳದಲ್ಲಿ ಭೀಕರ ಭೂಕಂಪ ಸಂಭವಿಸಿ ಸಾವಿರಾರು ಜನ ಸಾವಿಗೀಡಾಗಿದ್ದಾರೆ. ಸಾವಿರಾರು ಮಂದಿ ಆಶ್ರಯವಿಲ್ಲದೆ, ಅನ್ನ ನೀರು...
ಸಂತ್ರಸ್ತರು(ಸಂಗ್ರಹ ಚಿತ್ರ)
ಸಂತ್ರಸ್ತರು(ಸಂಗ್ರಹ ಚಿತ್ರ)
Updated on: 

ನವದೆಹಲಿ: ನೇಪಾಳದಲ್ಲಿ ಭೀಕರ ಭೂಕಂಪ ಸಂಭವಿಸಿ ಸಾವಿರಾರು ಜನ ಸಾವಿಗೀಡಾಗಿದ್ದಾರೆ. ಸಾವಿರಾರು ಮಂದಿ ಆಶ್ರಯವಿಲ್ಲದೆ, ಅನ್ನ ನೀರು ಇಲ್ಲದೇ ಪರದಾಡುತ್ತಿದ್ದಾರೆ ಇಂತಹವರ ನೆರವಿಗೆ ಮುಂದಾಗಿರುವ ಫೇಸ್ ಬುಕ್ ಸಂಸ್ಥೆ "ಡೋನೇಶನ್ ಬಟನ್' ಎಂಬ ಹೊಸ ಟೂಲ್ ಒಂದನ್ನು ಆರಂಭಿಸಿದೆ.

ನೇಪಾಳದಲ್ಲಿರುವ ಸಂತ್ರಸ್ತರ ನೆರವಿಗಾಗಿ ಫೇಸ್ ಬುಕ್ ಮುಂದಾಗಿದ್ದು, ತನ್ನ ಖಾತೆದಾರರ ಮೂಲಕ ಹಣ ಸಹಾಯ ಮಾಡಲು ಮುಂದಾಗಿದೆ.

ಫೇಸ್ ಬುಕ್ ಫೇಜ್ ನಲ್ಲಿ ಡೋನೇಶನ್ ಬಟನ್ ಎಂಬ ಟೂಲ್ ಮೂಲಕ ಖಾತೆದಾರರು ಸಂತ್ರಸ್ತರಿಗೆ ನೆರವಾಗಬಹುದು. ಈ ಬಟನ್ ಕ್ಲಿಕ್ ಮಾಡಿ, ಸಹಾಯಕ್ಕೆ ನೀಡುವ ಹಣ, ಪೂರ್ಣವಿವರ ನೀಡಿ ಮತ್ತೆ ಕ್ಲಿಕ್ ಏಗೈನ್ ಎಂಬ ನಾಲ್ಕು ಸ್ಟೇಪ್ ಮಾಡಿದರೆ ಸಾಕು. ನೇಪಾಳದ ಸಂತ್ರಸ್ತರಿಗೆ ನೆರವಾಗುತ್ತೀರಿ.

ಈಗಾಗಲೇ ಸಾಕಷ್ಟು ಮಂದಿ ಈ ಬಟನ್ ಕ್ಲಿಕ್ ಮಾಡಿ ಸಹಾಯ ಮಾಡುತ್ತಿದ್ದಾರೆ. ಸಹಾಯ ಮಾಡಲು ಇಚ್ಛಿಸುವ ಖಾತೆದಾರರು ಫೇಸ್ ಬುಕ್ ಪೇಜಿನ ಟಾಪ್ ನಲ್ಲಿ ಬರುವ ಡೋನೇಶನ್ ಬಟನ್ ಕ್ಲಿಕ್ ಮಾಡಿ ವಿವರ ನೀಡಿ ಧನ ಸಹಾಯ ಮಾಡಬಹುದಾಗಿದೆ ಎಂದು ಫೇಸ್ ಬುಕ್ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com