

ನವದೆಹಲಿ: ಪಾಕಿಸ್ತಾನ ಗುಪ್ತಚರ ಇಲಾಖೆಗಳಿಂದ ಹ್ಯಾಕಿಂಗ್ ನಡೆಯುವ ಸಾಧ್ಯತೆ ಇದೆ ಎಂದು ಭಾರತ ಸರ್ಕಾರ ಸೂಕ್ಷ್ಮ ಸಚಿವಾಲಯಲಗಳಿಗೆ ಎಚ್ಚರಿಕೆ ನೀಡಿದೆ.
ರಹಸ್ಯ ಮಾಹಿತಿಯನ್ನು ಪತ್ತೆಹಚ್ಚುವುದಕ್ಕಾಗಿ ಪಾಕಿಸ್ತಾನ ಗುಪ್ತಚರ ಇಲಾಖೆ ಭಾರತದ ಸಚಿವಾಲಯಗಳ ಸಂವಹನ ಜಾಲವನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ರಕ್ಷಣಾ ಇಲಾಖೆ, ವಿದೇಶಾಂಗ ಇಲಾಖೆ, ನಾಗರಿಕ ವಿಮಾನಯಾನ, ಹಣಕಾಸು, ದೂರಸಂಪರ್ಕ ಹಾಗೂ ಗೃಹ ಸಚಿವಾಲಯಗಳಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದ್ದು, ಸಚಿವಾಲಯಗಳ ಕಂಪ್ಯೂಟರ್ ಗಳಲ್ಲಿರುವ ರಹಸ್ಯ ಮಾಹಿತಿಗಳನ್ನು ಆಂತರಿಕ ಸಂವಹನ ತಂತ್ರಾಂಶಕ್ಕೆ ಸೇರಿಸಲು ಸೂಚನೆ ನೀಡಲಾಗಿದೆ.
ಪಾಕಿಸ್ತಾನ ಗುಪ್ತಚರ ಇಲಾಖೆ ಭಾರತದ ಸೂಕ್ಷ್ಮ ಭದ್ರತಾ ಸಂಸ್ಥೆಗಳ, ಸಶಸ್ತ್ರ, ಅರೆ ಸೈನ್ಯದ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡಿದ್ದು, ಸಂವಹನ ಜಾಲವನ್ನು ಹ್ಯಾಕ್ ಮಾಡುವ ಮೂಲಕ ರಹಸ್ಯ ಮಾಹಿತಿಯನ್ನು ಪಡೆಯಲು ಯತ್ನಿಸುತ್ತಿದೆ ಎಂದು ಸರ್ಕಾರ ಹೇಳಿದೆ.